ಐದನೇ ಬಾರಿ ಸೂರ್ತಿಲ ಪಡ್ಪು ಭಾಗಕ್ಕೆ ಆನೆ ದಾಳಿ ನಡೆಸಿ ಕೃಷಿ ಹಾನಿ ಮಾಡಿದ ಘಟನೆ ಸಂಭವಿಸಿದೆ.

ನಿನ್ನೆ ರಾತ್ರಿ 8 ಗಂಟೆಗೆ ಶಶಿಧರ ಶೆಟ್ಟಿ ಪಡ್ಪು, ಬಾಲಕೃಷ್ಣ ಶೆಟ್ಟಿ ಪಡ್ಪು, ವಿಜಯಕುಮಾರ್ ಪಡ್ಪು, ಸುಮಿತ್ರಾ ಇಂಜಿನಿಯರ್ ರವರ ತೋಟಕ್ಕೆ ದಾಳಿ ಮಾಡಿದ ಆನೆ ಗಳ ಹಿಂಡು ಬಾಳೆ, ಕೋಕೋ, ತೆಂಗು , ಅಡಿಕೆ ಕೃಷಿಗಳನ್ನು ನಾಶಪಡಿಸಿದ್ದು ಪೈಪುಗಳನ್ನು ಹುಡಿ ಮಾಡಿ ಹೋಗಿದೆ.
















ಇದೇ ರೀತಿ ಪ್ರತಿ ಸಲವೂ ಆನೆ ದಾಳಿ ನಡೆಸಿದರೆ ನಾವು ತೋಟಕ್ಕೆ ಹೋಗಬೇಕಾಗಿಲ್ಲ. ಅರಣ್ಯ ಇಲಾಖೆಯವರು ಬರುತ್ತಾರೆ ಹೋಗುತ್ತಾರೆ ಕೇಳಿದರೆ ಪರಿಹಾರ ಇದೆ ಎಂದು ಹೇಳುತ್ತಾರೆ ಆದರೆ ಇದುವರೆಗೂ ಪರಿಹಾರ ದೊರೆತಿಲ್ಲ ಎಂದು ಕೃಷಿಕರು ನಮ್ಮ ಅಳಲು ತೋಡಿಕೊಂಡಿದ್ದಾರೆ.











