ದೆಹಲಿಯಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವ ವಿಶೇಷ ರಾಯಭಾರಿಯಾಗಿ ಆಯ್ಕೆಯಾದ ಯಶಸ್ ರೈ ಬಿ.ಎಲ್. ರವರಿಗೆ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ವತಿಯಿಂದ ಸನ್ಮಾನ

0

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜು, ಸುಳ್ಯ ಇದರ ತೃತೀಯ ವರ್ಷದ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಯಶಸ್ ರೈ ಬಿ.ಎಲ್. ದೆಹಲಿಯಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಭಾಗವಹಿಸಲು ಕರ್ನಾಟಕ ರಾಜ್ಯದಿಂದ ವಿಶೇಷ ರಾಯಭಾರಿಯಾಗಿ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಮುಖಾಂತರ ರಾಷ್ಟ್ರ ಯುವಜನೋತ್ಸವ ಸಾಂಸ್ಕೃತಿಕದಂತಹ ಕಾರ್ಯಕ್ರಮದಲ್ಲಿ ಪ್ರತಿನಿಧಿಸಲಿರುವುದರಿಂದ, ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿಗೆ ಹೆಮ್ಮೆ ತಂದಿರುತ್ತದೆ.

ಈ ಸಂದರ್ಭದಲ್ಲಿ ಇವರನ್ನು ಡಾ. ರೇಣುಕಾಪ್ರಸಾದ್ ಕೆ.ವಿ, ಚೇರ್‌ಮೆನ್ ಕಮಿಟಿ ಬಿ ಎ.ಒ.ಎಲ್.ಇ.(ರಿ) ಸುಳ್ಯ/ಉಪಾಧ್ಯಕ್ಷರು ಕರ್ನಾಟಕ ಒಕ್ಕಲಿಗರ ಸಂಘ, ಬೆಂಗಳೂರು ಇವರು ಆ.೦೮ರಂದು ಶಾಲು ಹೊದಿಸಿ ನಗದು ಮೊತ್ತವನ್ನು ನೀಡಿ ಶುಭ ಹಾರೈಸಿದರು. ಇವರು ಕೊಡಗು ಜಿಲ್ಲೆಯ ಮೂರ್ನಾಡು ಕೊಡಂಬುರುವಿನ ಬಿ.ಎನ್. ಲವ ಕುಮಾರ್ ಮತ್ತು ಶ್ರೀಮತಿ ಜಯಂತಿ ಬಿ.ಬಿ. ಅವರ ದ್ವಿತೀಯ ಪುತ್ರ.


ಈ ಸಂದರ್ಭದಲ್ಲಿ ಡಾ. ಉಜ್ವಲ್ ಯು.ಜೆ., ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು, ಪ್ರಾಂಶುಪಾಲ ಡಾ. ಸುರೇಶ ವಿ., ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಡಾ. ಕುಸುಮಾಧರ ಎಸ್., ಎಂ.ಬಿ.ಎ. ವಿಭಾಗ ಮುಖ್ಯಸ್ಥ ಪ್ರೊ. ಕೃಷ್ಣಾನಂದ ಎ, ಕಾಲೇಜಿನ ಆಡಳಿತಾಧಿಕಾರಿ ನಾಗೇಶ್ ಕೊಚ್ಚಿ ಉಪಸ್ಥಿತರಿದ್ದರು.