ಕೇಂದ್ರದಲ್ಲಿ ಬಿ.ಜೆ.ಪಿ ಸರಕಾರ ಅಧಿಕಾರಕ್ಕೆ ಬಂದಾಗ ವರ್ಷಕ್ಕೆ ಲಕ್ಷಗಟ್ಟಲೆ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದ ಬಳಿಕ ಈ ದೇಶದ ಯುವಕ ಯುವತಿಯರು ಉದ್ಯೋಗ ಕೇಳಿದಾಗ “ಪಕೋಡ ಬೇಜೋ” ಎಂಬ ಅಭಿಯಾನವನ್ನು ಬಿ.ಜೆ.ಪಿ ಪ್ರಾರಂಭಿಸಿ ಯುವಕ ಯುವತಿಯರ ಆಶೆಯನ್ನು ಕಮರಿಸಿದರು.















ಇದೀಗ ಅಡಿಕೆ ಕೃಷಿಗೆ ಹಳದಿ ಹಾಗೂ ಇನ್ನಿತರ ರೋಗಗಳು ಬಾಧಿಸಲ್ಪಟ್ಟು ಅಡಿಕೆ ಬೆಳೆಗಾರರು ಸಂಕಷ್ಟಕ್ಕೀಡಾದಾಗ ಅಡಿಕೆ ಕೃಷಿಗೆ ಬಂದ ರೋಗಗಳನ್ನು ಗುಣಪಡಿಸುವರೇ ಔಷಧಿಗಳನ್ನು ಹುಡುಕುವ ಬದಲು ದಕ್ಷಿಣ ಕನ್ನಡದಲ್ಲಿ ಬೆಳೆಸಲಾಗದ ಕಾಫಿ ಕೃಷಿಯನ್ನು ಪರ್ಯಾಯ ಕೃಷಿಯನ್ನಾಗಿ ಬೆಳೆಸಬೇಕು. ಎಂದು “ಕಾಪಿಕೊ” ಎಂಬ ರಂಗಿನ ಹೆಸರನ್ನಿಟ್ಟು ಅಡಿಕೆ ಬೆಳೆಗಾರರನ್ನು ಮರಳು ಮಾಡುವುದಕ್ಕೆ ಮಾಡಿರುವ ಒಂದು ವಿನೂತನ ಪ್ರಯತ್ನ ನಮ್ಮ ಸನ್ಮಾನ್ಯ ಸಂಸದರದ್ದು ಆಗಿದೆ. ಇದರ ಪಲಿತಾಂಶವೂ ಕೂಡಾ ಯುವಕ ಯುವತಿಯರು ಉದ್ಯೋಗಕ್ಕಾಗಿ ಆಕಾಶದತ್ತ ಮುಖ ಮಾಡುವಂತೆ ಆಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತದೆ .
ಯಾವುದು ಒಣ ಹವೆಯಲ್ಲಿ ಆಗಬೇಕು ಅದು ಒಣ ಹವೆಯಲ್ಲಿ ಆಗಬೇಕು ವಿನಹಃ ಶೀತ ಹವೆಯಲ್ಲಿ ಆಗುವಂತ ಸಾಧ್ಯತೆಗಳು ಇಲ್ಲ. ಶೀತ ಹವೆಯಲ್ಲಿ ಆಗ ಬೇಗಾಗಿರುವುದು ಬಹುತೇಕವಾಗಿ ನಮ್ಮಿಗೆ ಕೊಡಗು ,ಸಕಲೇಶಪುರ ಜಿಲ್ಲೆಗಳಲ್ಲಿ ಆಗುತ್ತದೆ. ನಮ್ಮ ಜಿಲ್ಲೆಯಲ್ಲಿ ಅದು ಅಂತಹ ಕಾಫಿ ಬೆಳೆಗೆ ಅನುಕೂಲ ವಾಗಿರುವ ಶೀತ ಹವೆ ಇರುವುದಿಲ್ಲ.ಹಾಗಾಗಿ ಕಾಫಿ ಕೃಷಿ ಅಸಾಧ್ಯ ಎನ್ನುವುದು ನನ್ನ ಭಾವನೆಯಾಗಿದೆ.
ಎಂದು ಕಾಂಗ್ರೆಸ್ ಮುಖಂಡ ಎಂ. ವೆಂಕಪ್ಪ ಗೌಡ ಟೀಕಿಸಿದ್ದಾರೆ.










