ಅಮಾನತಿನಲ್ಲಿದ್ದ ಕೊಲ್ಲಮೊಗ್ರು ಗ್ರಾ.ಪಂ ಸಿಬ್ಬಂದಿ ಕರ್ತವ್ಯಕ್ಕೆ ಹಾಜರು ವಿರೋಧಿಸಿ ಗ್ರಾಮಸ್ಥರಿಂದ ಪ್ರತಿಭಟನೆ

0

ಭ್ರಷ್ಟಾಚಾರ ನಡೆಸಿದಾತನಿಗೆ ಕೆಲಸ ಕೊಡಬೇಡಿ, ಭ್ರಷ್ಟಾಚಾರದಲ್ಲಿ ಪಾಲ್ಗೊಂಡವರನ್ನು ಶಿಕ್ಷಿಸಲು ಆಗ್ರಹ

ಕೊಲ್ಲಮೊಗ್ರು ಗ್ರಾ.ಪಂ ಸಿಬ್ಬಂದಿಯೋರ್ವರನ್ನು ಕರ್ತವ್ಯ ಲೋಪ ಆಧಾರದಲ್ಲಿ ಮೂರು ತಿಂಗಳ ಹಿಂದೆ ಅಮಾನತಿಲ್ಲಿಟ್ಟಿದ್ದು ಅವರು ಮತ್ತೆ ಕರ್ತವ್ಯಕ್ಕೆ ಹಾಜರಾಗಿರುವುದನ್ನು ಪ್ರಶ್ನಿಸಿ ಗ್ರಾಮಸ್ಥರು ಆ‌ . 29 ಗ್ರಾ.ಪಂ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಕೊಲ್ಲಮೊಗ್ರ ಗ್ರಾಮ ಪಂಚಾಯತ್ ಸಿಬ್ಬಂದಿಯಾದ ಸಂತೋಪ್ ಮೇಲೆ ಗ್ರಾ.ಪಂ ನ ಸ್ವತ್ತು ಕಳವು ಆರೋಪ ಹೊರಿಸಿ ಅಮಾನಲ್ಲಿಟ್ಟಿದ್ದರು. ಗ್ರಾಮ ಸಭೆಯಲ್ಲೂ ಮತ್ತೆ ಕೆಲಸಕ್ಕೆ ತೆಗೆದುಕೊಳ್ಳದಂತೆ ನಿರ್ಣಯ ಮಾಡಲಾಗಿತ್ತು.ಹಾಗಿದ್ದೂ ಅವರು ನಮ್ಮ ಗ್ರಾ.ಪಂ ನಲ್ಲಿ ಮತ್ತೆ ಕರ್ತವ್ಯ ದಲ್ಲಿ ಮುಂದುವರಿಯಬಾರದು. ಸಂತೋಷ್ ಮಾಡಿದ ಭ್ರಷ್ಟಾಚಾರವನ್ನು ಬೆಂಬಲಿಸಿದವರ ಮೇಲೆಯೂ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳ ಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿದ್ದ ಸತೀಶ್ ಟಿ.ಎನ್, ಶೇಖರ್ ಅಂಬೆಕಲ್ಲು, ವೀಣಾನಂದ, ಪ್ರದೀಪ್ ಕೆ.ಎಲ್, ಉದಯ ಶಿವಾಲ ಮತ್ತಿತರರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಪ್ರತಿಭಟನಾ ನಿರತರು ಫಲಕ ಹಿಡಿದು ವ್ಯವಸ್ಥೆ ವಿರುದ್ದ ಘೋಷಣೆ ಕೋಗಿದರು. ಹಲವಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.