
ಶ್ರೀನಿಧಿ ಮಹಿಳಾ ಮಂಡಲದ ಪಡ್ಪು-ಕಾಯರ್ತೋಡಿ-ಸೂರ್ತಿಲ ನೂತನ ಪದಾಧಿಕಾರಿಗಳ ಪದಗ್ರಹಣ, 25ನೇ ವರ್ಷದ ಶ್ರೀ ಗಣೇಶೋತ್ಸವ ಪ್ರಯುಕ್ತ ವಿವಿಧ ಕ್ರೀಡಾ ಸ್ಪರ್ಧೆಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳಾ ಮಂಡಳದ ಸದಸ್ಯರ ಮಕ್ಕಳ ಗುರುತಿಸುವಿಕೆ ಆ. 31ರಂದು ಶ್ರೀನಿಧಿ ಮಹಿಳಾ ಮಂಡಲದ ವಠಾರದಲ್ಲಿ
ನಡೆಯಿತು. ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಕಲಾವತಿ ತೀರ್ಥರಾಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಮಧುಮತಿ ಬೊಳ್ಳೂರು ಪದಗ್ರಹಣ ನೆರವೇರಿಸಿದರು.

ಸೂರ್ತಿಲ ಶ್ರೀ ರಕ್ತೇಶ್ವರಿ ಸೇವಾ ಸಮಿತಿಯ ಅಧ್ಯಕ್ಷ ನಾರಾಯಣ ಕೇಕಡ್ಕ ಸ್ಪರ್ಧಾ ಕಾರ್ಯಕ್ರಮಗಳನ್ನು ಉದ್ಘಾಟಸಿದರು.
ಶ್ರೀಮತಿ ಶಾರದ ಜಯರಾಮ, ಶ್ರೀಮತಿ ಅರ್ಪಿತಾ ಅನಿಲ್ , ಶ್ರೀಮತಿ ರತ್ನ ವೆಂಕಟೇಶ್ ಪ್ರಾರ್ಥಿಸಿದರು. ಶ್ರೀಮತಿ ಜಯಮಾಲ ಶಿವಪ್ರಕಾಶ್ ಸ್ವಾಗತಿಸಿ, ಶ್ರೀಮತಿ ರಶ್ಮಿ ಉಂಪೇದ್ರ ವಂದಿಸಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಶ್ರೀಮತಿ ಹೇಮಾ ವೇಣುಗೋಪಾಲ್ ಮತ್ತು ಶ್ರೀಮತಿ ಲತಾ ರಾಧಾಕೃಷ್ಣ ನಿರ್ವಹಿಸಿದರು.
ಸಂಜೆ ಸಮಾರೋಪ ಸಮಾರಂಭ, ಬಹುಮಾನ ವಿತರಣೆ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಿತು. ಮಹಿಳಾ ಮಂಡಲದ ನೂತನ ಅಧ್ಯಕ್ಷೆ ಶ್ರೀಮತಿ ಪ್ರಿಯಾ ಬಳ್ಳಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿದಿರೆ, ಕಾಯ್ರತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ. ವೆಂಕಪ್ಪ ಗೌಡ, ಸುಳ್ಯ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಡಾ. ಸವಿತಾ ಸಿ.ಕೆ ಭಾಗವಹಿಸಿ ಶುಭ ಹಾರೈಸಿದರು.









ಮಹಿಳಾ ಮಂಡಲಕ್ಕೆ ಇನ್ನರ್ ವೀಲ್ ಕ್ಲಬ್ ವತಿಯಿಂದ ಚಾಯರ್ ಗಳನ್ನು ಕೊಡುಗೆಯಾಗಿ ನೀಡಲಾಯಿತು. ವೇದಿಕೆಯಲ್ಲಿ ಮಹಿಳಾ ಮಂಡಲದ ಗೌರವಾಧ್ಯಕ್ಷೆ ಶ್ರೀಮತಿ ಕಲಾವತಿ ತೀರ್ಥರಾಮ ಉಪಸ್ಥಿತರಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳಾ ಮಂಡಲದ ಸದಸ್ಯರ ಮಕ್ಕಳಾದ ಭೂಮಿಕಾ ವಿ.ಕೆ, ತನ್ವಿ ಕೆ.ಟಿ, ಅನುಷಾ ಕೆ ಇವರನ್ನು ಗುರುತಿಸಿ ಸನ್ಮಾನಿಸಲಾಯಿತು.
ಇವರ ಸಾಧನೆಯ ವಿವರವನ್ನು ಶ್ರೀಮತಿ ಹೇಮ ವೇಣುಗೋಪಾಲ್ ಓದಿದರು. ಬಹುಮಾನದ ವಿಜೇತರ ಪಟ್ಟಿಯನ್ನು ಶ್ರೀಮತಿ ಜ್ಯೋತಿ ಹರೀಶ್ ವಾಚಿಸಿದರು. ಶ್ರೀಮತಿ ಲತಾ ರಾಧಾಕೃಷ್ಣ ಸ್ವಾಗತಿಸಿ, ಕಾರ್ಯದರ್ಶಿ ಶ್ರೀಮತಿ ಶ್ರುತಿ ಮಂಜುನಾಥ ವಂದಿಸಿದರು. ಶ್ರೀಮತಿ ಹೇಮ ವೇಣುಗೋಪಾಲ್ ಮತ್ತು ಶ್ರೀಮತಿ ಲತಾ ರಾಧಾಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶ್ರೀನಿಧಿ ಮಹಿಳಾ ಮಂಡಲದ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.










