ಇಂದು ಅದ್ದೂರಿಯ ಶೋಭಾಯಾತ್ರೆ
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಸುಬ್ರಹ್ಮಣ್ಯ ವತಿಯಿಂದ 55ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆ.27 ರಿಂದ ಆರಂಭವಾಗಿದ್ದು ಇಂದು ಸೆ.2 ರ ಅಪರಾಹ್ನ 2 ಗಂಟೆ ಅದ್ದೂರಿಯ ಶೋಭಾಯಾತ್ರೆ ನಡೆಯಲಿದೆ.









ಇಂದು ಪೂರ್ವಾಹ್ನ ಕೆ. ಯಜ್ಞೇಶ್ ಆಚಾರ್ ಮತ್ತು ಬಳಗವರಿಂದ ಭಕ್ತಿ ಸಂಗೀತ ನಡೆಯುತಿದ್ದು. ಮಧ್ಯಾಹ್ನ ಮಹಾಪೂಜೆ, ಅಪರಾಹ್ನ ಗಂಟೆ 2.00 ರಿಂದ ಸರ್ವಾಲಕೃತ ರಥದಲ್ಲಿ ಶ್ರೀ ಮಹಾಗಣಪತಿ ಶೋಭಾಯಾತ್ರೆ ಬ್ಯಾಂಡ್ ವಾದ್ಯ, ಚೆಂಡೆ, ಟ್ಯಾಬ್ಲೋಗಳಿದ್ದು ಅದ್ದೂರಿಯಾಗಿ ನಡೆಯಲಿದೆ. ರಾತ್ರಿ ಕುಮಾರಧಾರದಲ್ಲಿ ಗಣಪತಿ ಜಲಸ್ತಂಭನ ನೆರವೇರಲಿದೆ.










