ಜ್ಯೋತಿ ವಿದ್ಯಾಸಂಘದ ೨೦೨೪-೨೫ ನೇ ಸಾಲಿನ ವಾರ್ಷಿಕ ಮಹಾಸಭೆ ಸೆಪ್ಟೆಂಬರ್ ೬ ರಂದು ಜ್ಯೋತಿ ಪ್ರೌಢಶಾಲೆಯ ಸಭಾ ಭವನದಲ್ಲಿ ನಡೆಯಿತು. ಈ ವೇಳೆ ಜ್ಯೋತಿ ವಿದ್ಯಾಸಂಘದ ಕಾರ್ಯಕಾರಿ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.








ಜ್ಯೋತಿ ವಿದ್ಯಾಸಂಘದ ಅಧ್ಯಕ್ಷರಾಗಿ, ರಾಕೇಶ್ ರೈ, ಉಪಾಧ್ಯಕ್ಷರಾಗಿ ಕೆ.ಪಿ.ರಕ್ಷಿತ್, ಕಾರ್ಯದರ್ಶಿಯಾಗಿ ನಾಗರಾಜ್ ಬಿ.ಹೆಬ್ಬಾಳ್, ಸಹ ಕಾರ್ಯದರ್ಶಿಯಾಗಿ ಎನ್.ನೇತ್ರಾವತಿ, ಸಂಚಾಲಕರಾಗಿ ಮಹೇಶ್ ಕುಮಾರ್, ಖಜಾಂಚಿಯಾಗಿ ಯು.ಎಚ್.ಮಂಜುನಾಥ್ ಭಟ್, ನಿರ್ದೇಶಕರಾಗಿ ವಿಷ್ಣು ಪಿ. ಕಟ್ಟಿ, ಡಾ.ಎನ್.ಎ.ಜ್ಞಾನೇಶ್, ಎನ್.ಎ.ರಾಮಚಂದ್ರ, ಯು.ಶಕುಂತಲಾ ರೈ, ಅರ್ಚನಾ ಜೋಶಿ, ಸುಮಾ ನಾಗರಾಜ್, ದೀಪಕ್ ನಾಗರಾಜ್, ಎಂ.ಕವನ ಹಾಗೂ ಪ್ರೇಮಸಾಗರ್ ಆಯ್ಕೆಯಾದರು. ಎಲ್ಲ ಪದಾಧಿಕಾರಿಗಳನ್ನು ಸಭೆಯಲ್ಲಿ ಸರ್ವಾನುಮತದಿಂದ ನೇಮಕ ಮಾಡಲಾಯಿತು.

ಮುಂದಿನ ಮೂರು ವರ್ಷಗಳವರೆಗೆ ಈ ಕಾರ್ಯಕಾರಿ ಸಮಿತಿ ಅಸ್ತಿತ್ವದಲ್ಲಿರುತ್ತದೆ.
ಸಂಘದ ಅಧ್ಯಕ್ಷರಾದ ರಾಕೇಶ್ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ, ೨೦೨೪-೨೫ ನೇ ಸಾಲಿನ ವರದಿ ಮಂಡನೆ, ಲೆಕ್ಕಪತ್ರ ಮಂಡನೆ, ೨೦೨೫-೨೬ ನೇ ಸಾಲಿನ ಅಂದಾಜು ಆಯವ್ಯಯ ಮಂಡನೆಯಾಯಿತು.










