ಕಾರು ತಡೆಗೋಡೆಗೆ ಡಿಕ್ಕಿಯಾಗಿ ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ಅರಂತೋಡು ಬಳಿ ಸಂಭವಿಸಿದೆ









ಮಡಿಕೇರಿಯಿಂದ ಕಾಸರಗೋಡು ಕಡೆಗೆ ತೆರಳುತ್ತಿದ್ದ ಕಿಗರ್ ಕಾರು (ಕೆಎಲ್ ೭೯.ಎ ೪೮೪೪) ಅರಂತೋಡು ಬಳಿ ಕೊಡೆಂಕೇರಿ ಸಮೀಪ ರಸ್ತೆಯ ತಡೆ ಗೋಡೆಗೆ ಗುದ್ದಿತು. ಪರಿಣಾಮ ಕಾರಿನ ಮುಂಭಾಗ ಜಖಂಗೊಂಡಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.










