ಶ್ರೀ ಶಾರದಾಂಬ ಶೋಭಾಯಾತ್ರೆ: ಹಳೆಗೇಟು ಶಿವಾಜಿ ಗೆಳೆಯರ ಬಳಗದ ವತಿಯಿಂದ ಸಂಗೀತ ರಸಮಂಜರಿ ಕಾರ್ಯಕ್ರಮ

0

ಹಳೆಗೇಟು ವಸಂತಕಟ್ಟೆಯಲ್ಲಿ ಶಿವಾಜಿ ಯುವ ಬಳಗದ ವತಿಯಿಂದ ಶ್ರೀ ಶಾರದಾಂಬ ಶೋಭಾ ಯಾತ್ರೆಯ ಅಂಗವಾಗಿ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಅ. ೭ ರಂದು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಸಭಾ ವೇದಿಕೆಯನ್ನು ಉದ್ಯಮಿ ನಿಸರ್ಗ ಇಂಡಸ್ಟ್ರೀಸ್ ಮಾಲಕ ಕಸ್ತೂರಿ ಶಂಕರ್ ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಮಿಲ ಇಂಡಸ್ಟ್ರೀಸ್ ಮಾಲಕ ಸುರೇಶ್ ಭಟ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ವೇದಿಕೆಯ ಅಧ್ಯಕ್ಷತೆಯನ್ನು ಶಿವಾಜಿ ಬಳಗದ ಸ್ಥಾಪಕ ಅಧ್ಯಕ್ಷ ರಾಧಾಕೃಷ್ಣ ನಾಯಕ್‌ರವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಹಳೆಗೇಟು ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷ ಬಾಲಗೋಪಾಲ ಸೇರ್ಕಜೆ, ನಗರ ಪಂಚಾಯತ್ ಸದಸ್ಯರಾದ ಬುದ್ಧ ನಾಯ್ಕ್, ಹಳೆಗೇಟು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀನಿವಾಸ್ ರಾವ್, ಸಮಿತಿಯ ಕಾರ್ಯದರ್ಶಿ ಸಚಿನ್ ರಾವ್,ಹಾಗೂ ಗುರುಪ್ರಸಾದ್ ಮೇರ್ಕಜೆ ಮೊದಲಾದವರು ಉಪಸ್ಥಿತರಿದ್ದರು.

ಶಿವಾಜಿ ಬಳಗದ ಪದಾಧಿಕಾರಿ ಗುರುಪ್ರಸಾದ್ ನಾಯಕ್ ಸ್ವಾಗತಿಸಿ ಗೌತಮ್ ವಂದಿಸಿದರು. ರಾಜ್ ಮುಕೇಶ್ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಸಂಗೀತ ರಸಮಂಜರಿ ಹಾಗೂ ನೃತ್ಯ ಕಾರ್ಯಕ್ರಮಗಳು ನಡೆಯಿತು.