















ಯುವಜನ ಸಂಯುಕ್ತ ಮಂಡಳಿ ಸುಳ್ಯ, ಸರ್ವೋದಯ ಯುವಕ ಮಂಡಲ ಕಲ್ಮಕಾರು ಇದರ ಆಶ್ರಯದಲ್ಲಿ ಪಂಚಸಪ್ತತಿ ೨೦೨೫ ರ ಪ್ರಥಮ ಕಾರ್ಯಕ್ರಮ ಕಲ್ಮಕಾರಿನಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಯುವಜನ ಸಂಯುಕ್ತ ಮಂಡಳಿಯ ಉಸ್ತುವಾರಿ ನಿರ್ದೇಶಕ ದಿನೇಶ್ ಹಾಲೆಮಜಲು ಚಾಲನೆ ನೀಡಿದರು. ನಂತರ ಕಾಲೋನಿಗೆ ತೆರಳಿ ಅಲ್ಲಿಯ ನಿವಾಸಿಗಳೊಂದಿಗೆ ಪರಿಸರ ಸ್ವಚ್ಛತೆ ಜಾಗೃತಿಯ ಬಗ್ಗೆ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಯುವಕ ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮುಂದಿನ ೭೨ ದಿನಗಳ ಕಾಲ ಸ್ವಚ್ಛತೆಗಾಗಿ ಬೇರೆ ಬೇರೆ ರೀತಿಯ ಈ ಕಾರ್ಯಕ್ರಮ ನಡೆಯಲಿದೆ. (ಚಿತ್ರ ವರದಿ : ಡಿ. ಹೆಚ್.)










