
ಕಾರ್ತಿಕ ಮಾಸದ ಮೊದಲ ಸೋಮವಾರವಾದ ಅ. 27 ರಂದು ಸಂಪಾಜೆಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ದಲ್ಲಿ ಸಾಮೂಹಿಕ ರುದ್ರ ಪಠಣ ಸಹಿತ ರುದ್ರ ಹೋಮ, ಹಾಗೂ ದ್ವಾದಶ ನಾರೀಕೇಳ ಗಣಪತಿ ಹವನ ದೇವಸ್ಥಾನದ ಅರ್ಚಕರಾದ ಶಂಕರ್ ಹೆಬ್ಬಾರ್ ರವರ ನೇತೃತ್ವದಲ್ಲಿ ನಡೆಯಿತು. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪೂಜಾ ವಿಧಿ ವಿಧಾನಗಳಲ್ಲಿ ಭಾಗವಹಿಸಿದರು.
















ಕಾರ್ತಿಕ ಮಾಸದ ದೀಪೋತ್ಸವ ಪ್ರತೀ ದಿನ ನಡೆಯುತ್ತಿದ್ದು, ನ. ೧೭ ರಂದು ಸಾಮೂಹಿಕ ಮೃತ್ಯುಂಜಯ ಹೋಮ ಜರುಗಲಿದ್ದು ಭಕ್ತಾಧಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕಾಗಿ ಆಡಳಿತ ಮಂಡಳಿಯವರು ವಿನಂತಿಸಿಕೊಂಡಿದ್ದಾರೆ.










