
ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಕ್ಷೇತ್ರದ ತಂತ್ರಿಗಳಾದ ಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ ಪೂರ್ವ ಶಿಷ್ಟ ಪ್ರಕಾರ ಡಿ.14 ಮತ್ತು 15 ರಂದು ವಾರ್ಷಿಕ ವರ್ಷಾವದಿ ಜಾತ್ರೋತ್ಸವ ನಡೆಯಲಿರುವುದು. ಆ ಪ್ರಯುಕ್ತ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಎನ್ ಜಿ ಲೋಕನಾಥ ರೈಯವರ ಅದ್ಯಕ್ಷತೆಯಲ್ಲಿ ನ.14 ರಂದು ದೇವಳದ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು.
















ಸದಸ್ಯರಾದ ಲೋಕೇಶ್ ಕೇರ್ಪಡ, ವೇಣುಗೋಪಾಲ ರೈ, ಶ್ರೀಮತಿ ಕಸ್ತೂರಿ ಚಂದ್ರಶೇಖರ, ಶ್ರೀಮತಿ ಗುಣವತಿ ನಾವೂರು, ಪ್ರಮೋದ್ ಕುಮಾರ್ ರೈ, ವಾಚಣ್ಣ ಗೌಡ ಎಚ್, ಬಿಜಿಲ ಅಲೆಕ್ಕಾಡಿ ಹಾಗೂ ಶ್ರೀಮತಿ ಲೀಲಾವತಿ ಮಿಲ್ಕ್ ಮಾಸ್ಟರ್, ಶ್ರೀಮತಿ ವಾರಿಜಾ ದಾಮೋದರ್, ಮೀರಾ ಬಾಬು, ಬಾಗ್ಯ ಪ್ರಸನ್ನ ಕೆ, ಶೀಲಾವತಿ ರೈ, ಕುಸುಮವತಿ ರೈ, ನಿವೃತ ಅಧ್ಯಾಪಕ ನಾರಾಯಣ ಭಟ್ ಕೆ ಎನ್, ಚೆನ್ನಪ್ಪ ಗೌಡ ಕೇರ್ಪಡ, ಸುಂದರ ಗೌಡ ಆರೆಂಬಿ, ವಿಶ್ವನಾಥ ರೈ ಕೂಲಾಯಿತೋಡಿ, ಸುಜಿತ್ ರೈ ಪಟ್ಟೆ, ಬಾಬು ಪೂಜಾರಿ ನೂಜಾಡಿ, ದಿನೇಶ್ ಅಮೀನ್ ಅಲೆಕ್ಕಾಡಿ, ಶ್ರೀಮತಿ ಯಶೋದ ಸುಂದರ ಕರಿಂಬಿಲ, ಹರೀಶ್ ಕೇರ್ಪಡ, ದೀಪಕ್ ರೈ ಎಣ್ಮೂರು, ದ್ರುವ ಕುಮಾರ್ ಕೇರ್ಪಡ, ಗಂಗಾಧರ ಪಂಡಿತ್ ಮೊದಲಾದವರು ಉಪಸ್ಥಿತರಿದ್ದರು.
ವರದಿ : ಸಂಕಪ್ಪ ಸಾಲ್ಯಾನ್ ಅಲೆಕ್ಕಾಡಿ











