ಸುಳ್ಯ ತಾಲೂಕು ಸರ್ಕಾರಿ ಆಸ್ಪತ್ರೆ ಯಲ್ಲಿ ವಿಕಲಚೇತನರಿಗೆ ಗುರುತಿನ ಚೀಟಿ ನೀಡುವ ಮತ್ತು ರಿನೀವಲ್ ಮಾಡುವ ಕ್ಯಾಂಪ್, ಅರೋಗ್ಯ ಇಲಾಖೆ ಮತ್ತು ವಿಕಲ ಚೇತನರ ಇಲಾಖೆಯ ವತಿಯಿಂದ ಜಂಟಿಯಾಗಿ ನ. 25 ರಂದು ನಡೆಯಿತು.

ವೈದ್ಯಾಧಿಕಾರಿ ಡಾ.ನವೀನ್, ಎಲುಬು ತಜ್ಞ ಡಾ. ಅಜಯ್ ಮತ್ತಿತರ ತಜ್ಞ ವೈದ್ಯರು ಸಹಕಾರ ನೀಡಿದರು.









ತಾಲೂಕು ಪಂಚಾಯತ್ ವಿಕಲ ಚೇತನರ ಇಲಾಖೆಯ ಎಂ ಆರ್ ಡಬ್ಲ್ಯೂ ಚಂದ್ರಶೇಖರ್, ನಗರ ಪಂಚಾಯತ್ ವಿಕಲ ಚೇತನರ ಇಲಾಖೆಯ ಯು ಆರ್ ಡಬ್ಲ್ಯೂ ಪ್ರವೀಣ್ ನಾಯಕ್, ಇತರ ಪಂಚಾಯತ್ ಗಳ ವಿ ಆರ್ ಡಬ್ಲ್ಯೂ ರವರಾದ ಉಮ್ಮರ್, ಲಿಖಿತ,, ಹರ್ಷಿತ್, ಷಣ್ಮುಖ, ವೆಂಕಟ್ರಮಣ, ಸದಾನಂದ, ಭವ್ಯ, ಪುಷ್ಪಶ್ರೀ, ಪುಟ್ಟಣ್ಣ, ಶರಣ್ಯ, ಕೃಷ್ಣ ಪ್ರಸಾದ್, ಕಾವೇರಿ ಮತ್ತು ದಾದಿ ನಯನ ಹಾಜರಿದ್ದರು.
ಹಲವಾರು ಜನ, ವಿಶೇಷ ಚೇತನರು ಇದರ ಪ್ರಯೋಜನ ಪಡೆದು ಕೊಂಡರು.










