














ಯುವಜನ ಸಂಯುಕ್ತ ಮಂಡಳಿ ಸುಳ್ಯ ಹಾಗೂ ಜನನಿ ಫ್ರೆಂಡ್ಸ್ ಕ್ಲಬ್ ಗುಂಡ್ಯ ಆಲೆಟ್ಟಿ ಇದರ ವತಿಯಿಂದ ನಡೆಯುತ್ತಿರುವ
ಪಂಚ ಸಪ್ತತಿ
75 ದಿನಗಳ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ನಾರ್ಕೋಡಿನಲ್ಲಿರುವ ಸದಾಶಿವ ಮಹಾದ್ವಾರದ ಬಳಿಯ ಪರಿಸರವನ್ನು ಸ್ವಚ್ಛಗೊಳಿಸಲಾಯಿತು.
ಈ ರಸ್ತೆಯು ಅಂತರ್ ರಾಜ್ಯ ಸಂಪರ್ಕದ ರಸ್ತೆಯಾಗಿದ್ದು ಕೇರಳದ ಬಂದಡ್ಕ ಮತ್ತು ಪಾಣತ್ತೂರು ಭಾಗಕ್ಕೆ ಸಂಚರಿಸುವ ಪ್ರಯಾಣಿಕರು ಗೊಂದಲಕ್ಕೀಡಾಗುವುದು ಸಹಜವಾಗಿ ಕಂಡು ಬರುತ್ತಿತ್ತು. ಇದನ್ನು ಮನಗಂಡು ಈ ಜಂಕ್ಷನ್ ನಲ್ಲಿ ಇಂಗ್ಲಿಷ್ ಮತ್ತು ಮಲಯಾಳಂ ಭಾಷೆಯ ರಸ್ತೆ ಸೂಚಕ ನಾಮಫಲಕವನ್ನು ಕ್ಲಬ್ ವತಿಯಿಂದ ಅಳವಡಿಸಲಾಯಿತು.

ಈ ಸಂದರ್ಭದಲ್ಲಿ ಕೆವಿಜಿ ಮೆಡಿಕಲ್ ಕಾಲೇಜ್ ಸಿಬ್ಬಂದಿ ತೀರ್ಥಶ್ ಪಾರೆಪ್ಪಾಡಿ, ಉದ್ಯಮಿಶ್ರೀನಾಥ್ ಅಲೆಟ್ಟಿ, ಕ್ಲಬ್ ಅಧ್ಯಕ್ಷ ಸತೀಶ್ ಕುಲಾಲ್, ಗೌರವಾಧ್ಯಕ್ಷ ಲತೀಶ್ ಗುಂಡ್ಯ ಹಾಗೂ
ಕ್ಲಬ್ಬಿನ ಸದಸ್ಯರು
ಉಪಸ್ಥಿತರಿದ್ದರು.










