
ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ಇದರ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮ ಡಿ. 11ರಂದು ಪೆರುವಾಜೆಯ ಜೆಡಿ ಆಡಿಟೋರಿಯಂನಲ್ಲಿ ನಡೆಯಿತು. ಆರಂಭದಲ್ಲಿ ಕ್ಲಬ್‌ನ ಸ್ಥಾಪಕಾಧ್ಯಕ್ಷ ಲ. ವಿಠಲ್ ಶೆಟ್ಟಿ ಪೆರುವಾಜೆ ಮತ್ತು ಲ. ದಯಾಕರ ಆಳ್ವ ಜಿಲ್ಲಾ ಗವರ್ನರ್ ಲ. ಕುಡ್ಪಿ ಅರವಿಂದ ಶೆಣೈಯವರನ್ನು ವೇದಿಕೆಗೆ ಕರೆತಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ಇದರ ಅಧ್ಯಕ್ಷ ಲ. ಯತೀಶ್ ಭಂಡಾರಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಡಿಸ್ಟ್ರಿಕ್ಟ್ ಗವರ್ನರ್ ಲ. ಕುಡ್ಪಿ ಅರವಿಂದ ಶೆಣೈ PMJF ಚಾರ್ಟರ್ ನೈಟ್ ಉದ್ಘಾಟಿಸಿ, ಶುಭ ಹಾರೈಸಿದರು. ಪ್ರಾಂತ್ಯಾಧ್ಯಕ್ಷ ಮತ್ತು ಬೆಳ್ಳಾರೆ ಲಯನ್ಸ್ ಕ್ಲಬ್‌ನ ವಿಸ್ತರಣಾಧಿಕಾರಿ ಲ. ಪಿ. ಆನಂದ ರೈ ದೇವಿನಗರ, ವಲಯಾಧ್ಯಕ್ಷ ಲ. ಜಗನ್ನಾಥ ರೈ ಗುತ್ತು, ಡಿಸ್ಟ್ರಿಕ್ ಪಿ.ಆರ್.ಓ ಲ. ಸುದರ್ಶನ ಪಡಿಯಾರ್, ಬೆಳ್ಳಾರೆ ಲಯನ್ಸ್ ಕ್ಲಬ್ ನ ನಿಕಟಪೂರ್ವ ಅಧ್ಯಕ್ಷ ಲ. ಉಷಾ ಬಿ. ಭಟ್ ಮತ್ತು ಕೋಶಾಧಿಕಾರಿ ಎಂ.ಕೆ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲ. ದಯಾಕರ ಆಳ್ವ ಅಧ್ಯಕ್ಷರಿಗೆ ಕಾಲರ್ ತೊಡಿಸಿದರು. ಲ. ಜಯಪ್ರಕಾಶ್ ಅಲೆಕ್ಕಾಡಿ ಧ್ವಜ ವಂದನೆ ಸಲ್ಲಿಸಿದರು. ಲ. ಚಂದ್ರಹಾಸ ರೈ ಪುಡ್ಕಜೆ ಲಯನ್ಸ್ ನೀತಿ ಸಂಹಿತೆ ವಾಚಿಸಿದರು.









ಸೇವಾ ಚಟುವಟಿಕೆಯಾಗಿ ಬೆಳ್ಳಾರೆ ಡಾ. ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನ ಕೊಳವೆ ಬಾವಿಗೆ ಬೋರ್ವೆಲ್ ಪಂಪ್ ಅಳವಡಿಕೆ, ಲ. ಉಷಾ ಬಿ. ಭಟ್ ರವರ ವೈಯಕ್ತಿಕ ದೇಣಿಗೆಯಾಗಿ ನೆಟ್ಟಾರು ಸ.ಹಿ.ಪ್ರಾ. ಶಾಲೆಗೆ ಚಯರ್ ಖರೀದಿಗೆ ರೂ. 5 ಸಾವಿರ ಧನಸಹಾಯ, ಸುಬ್ರಹ್ಮಣ್ಯದ ಕೆಎಸ್ಎಸ್ ಕಾಲೇಜಿನ ವಿದ್ಯಾರ್ಥಿನಿಗೆ ಆರ್ಥಿಕ ನೆರವು ನೀಡಲಾಯಿತು. ಕೊಡಿಯಾಲ ಆಯುಷ್ಮಾನ್ ಆರೋಗ್ಯ ಉಪಕೇಂದ್ರಕ್ಕೆ ಫಲಕ ಕೊಡುಗೆ, ಜಿಲ್ಲಾ ಗವರ್ನರ್ ಸೇವಾ ಕಾರ್ಯಕ್ರಮದಡಿಯಲ್ಲಿ ಕೆಯ್ಯೂರು ಕೆಪಿಎಸ್ ಪದವಿಪೂರ್ವ ವಿಭಾಗಕ್ಕೆ ಮತ್ತು ಮುಕ್ಕೂರು ಸ.ಹಿ.ಪ್ರಾ ಶಾಲೆಗೆ ಕಂಪ್ಯೂಟರ್ ಕೊಡುಗೆ, ಬೆಳ್ಳಾರೆ ಕೆಪಿಎಸ್‌ನ ಸ್ಕೌಟ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳಿಗೆ ಸಮವಸ್ತ್ರ ಖರೀದಿಗೆ ಧನಸಹಾಯ ನೀಡಲಾಯಿತು. ಲ. ಉಷಾ ಬಿ ಭಟ್ ಗವರ್ನರ್ ಲ. ಕುಡ್ಪಿ ಅರವಿಂದ ಶೆಣೈಯವರನ್ನು ಸಭೆಗೆ ಪರಿಚಯಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸೇವಾ ಯೋಜನೆಗೆ ಕ್ಲಬ್‌ನಿಂದ ಚೆಕ್ ನೀಡಲಾಯಿತು. ಜಿಲ್ಲಾ ಗವರ್ನರಿಗೆ ಅರ್ಪಿಸಿದ ಪ್ರಸಂಶನಾ ಪತ್ರವನ್ನು ಲ. ಸುನಿತಾ ಮನೋಹರ್ ವಾಚಿಸಿದರು. ಬಳಿಕ ಜಿಲ್ಲಾ ಗವರ್ನರನ್ನು ಸನ್ಮಾನಿಸಲಾಯಿತು. ಎಂ.ಜೆ.ಎಫ್ ದೇಣಿಗೆ ನೀಡಿದ ಲ. ಡಾ. ಶಿವಪ್ರಸಾದ್ ಶೆಟ್ಟಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಇವರ ಪರಿಚಯವನ್ನು ಲ. ಚಿದಾನಂದ ರೈ ನೆಲ್ಯಾಜೆ ವಾಚಿಸಿದರು. ಚೀಫ್ ಡಿಸ್ಟ್ರಿಕ್ಟ್ ಕಾರ್ಡಿನೇಟರ್ ಫಾರ್ ಗ್ಲೋಬಲ್ ಕಾಸ್ ಲ. ವೆಂಕಟೇಶ್ ಹೆಬ್ಬಾರ್ MJF ಮತ್ತು ಚೀಫ್ ಕಾರ್ಡಿನೇಟರ್ ಫಾರ್ ಕ್ಲಬ್ ಎಕ್ಸಟೆನ್ಷನ್ ಅಂಡ್ ಎಲ್.ಸಿ.ಐ.ಎಫ್ ಗ್ರ್ಯಾಂಟ್ ಅನಿಲ್ ಕುಮಾರ್ MJF ಶುಭ ಹಾರೈಸಿದರು. ವಿವಿಧ ಕ್ಲಬ್‌ಗಳ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿಗಳು ಮತ್ತು ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಕ್ಲಬ್‌ನ ಕಾರ್ಯದರ್ಶಿ ಲ. ಚೇತನ್ ಡಿ. ಶೆಟ್ಟಿ ವಂದಿಸಿದರು. ಲ. ಈಶ್ವರ ವಾರಣಾಶಿ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.










