ಎಣ್ಮೂರು: ಮರ ಬಿದ್ದು ಮನೆ ಜಖಂ, ಅಪಾರ ನಷ್ಟ

0

ಮನೆಯವರು ಶುಭಕಾರ್ಯಕ್ಕೆ ಹೋದ ಹಿನ್ನಲೆ ತಪ್ಪಿದ ಅನಾಹುತ

ಎಣ್ಮೂರು ಪರಿಸರದಲ್ಲಿ ಮೇ.10ರಂದು ಬೀಸಿದ ಗಾಳಿ ಮಳೆಗೆ ಮನೆಯೊಂದಕ್ಕೆ ಬೃಹದಾಕಾರದ ಮರವೊಂದು ಬಿದ್ದು ಜಖಂಗೊಂಡು ಅಂದಾಜು 50 ಸಾವಿರ ರೂ.ನಷ್ಟ ಸಂಭವಿಸಿದೆ.

ಎಣ್ಮೂರು ಗ್ರಾಮದ ಗಿರಿಜಾರವರ ಮನೆಗೆ ಮರ ಬಿದ್ದಿದೆ. ಮೇ.10ರಂದು ರಾತ್ರಿ ಮಳೆ ಸಹಿತ ಜೋರಾಗಿ ಗಾಳಿ ಬೀಸಿದ್ದು ಮನೆ ಸಮೀಪವಿದ್ದ ಹಾಲು ಮಡ್ಡಿ ಮರವು ಮನೆಯ ಮೇಲೆ ಬಿದ್ದಿದೆ. ಹಾಲು ಮಡ್ಡಿ ಮರದ ಎರಡು ಭಾಗವು ಹಾಲು ಮಡ್ಡಿಗಾಗಿ ಕೊರೆತಿದ್ದು, ಮರ ಬೀಳಲು ಪ್ರಮುಖ ಕಾರಣವಾಗಿದೆ.

ಈ ವೇಳೆ ಮನೆಯಲ್ಲಿದ್ದ ಗಿರಿಜಾ ಹಾಗೂ ಪುತ್ರ ದಿನೇಶ್‌ರವರು ಶುಭ ಕಾರ್ಯದ ನಿಮಿತ್ತ ಹೊರಗಡೆ ಹೋದ ಕಾರಣ ದೊಡ್ಡದಾದ ಅನಾಹುತ ತಪ್ಪಿದೆ.

ಸುಲಂತಡ್ಕ, ಅಲೆಂಗಾರ, ಗರಡಿ ರಸ್ತೆಯುದ್ದಕ್ಕೂ ಹಾಲು ಮಡ್ಡಿ ಮರಗಳಿದ್ದು, ಸರಕಾರದ ಮರವಾಗಿರುವ ಕಾರಣ ಯಾರು ಮುಟ್ಟುವಂತಿಲ್ಲ, ಜೊತೆಗೆ ಸಂಬಂಧಪಟ್ಟವರು ಈ ಕಡೆ ಯಾರು ಗಮನಹರಿಸುತ್ತಿಲ್ಲ ಎಂಬುವುದು ಸ್ಥಳೀಯರ ಅಗ್ರಹವಾಗಿದೆ.

ಇನ್ನೇನು ಮಳೆ ಪ್ರಾರಂಭವಾಗಲಿದ್ದು ಮರ ಬಿದ್ದು ಹಾನಿಯಾಗಿರುವ ಗಿರಿಜಾ ಹಾಗೂ ಅವರ ಪುತ್ರ ದಿನೇಶ್‌ರಿಗೆ ಮನೆಯ ರಿಪೇರಿಯನ್ನು ಮಾಡಿಕೊಡಬೇಕಾಗಿ ಜನರ ಅಗ್ರಹವಾಗಿದೆ.