ಸಂಪಾಜೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ವಿಜಯೋತ್ಸವ

0


ವಿರಾಜಪೇಟೆ ತಾಲೂಕು ಕಾಂಗ್ರೆಸ್ ಅಭ್ಯರ್ಥಿ ಪೊನ್ನಣ್ಣನವರು ಜಯಭೇರಿ ಗಳಿಸಿದ ಹಿನ್ನಲೆಯಲ್ಲಿ ಕೊ. ಸಂಪಾಜೆ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಕೊಯ್ನಾಡಿನಿಂದ ಸಂಪಾಜೆ ಗೇಟಿನವರೆಗೆ ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಸಂಪಾಜೆ ಗ್ರಾ. ಪಂ ಸದಸ್ಯ ಸುರೇಶ್ ಪಿ. ಎಲ್, ಮಾಜಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮೊಯಿದಿನ್ ಕುಂಞಿ, ಎಸ್. ಪಿ. ಹನೀಫ್ ಮೊದಲಾದ ಕಾರ್ಯಕರ್ತರು ಉಪಸ್ಥಿತರಿದ್ದರು.