ಎಣ್ಣೆಮಜಲು ಶಾಲೆ ಪಿಎಂಶ್ರೀ ಶಾಲೆಯಾಗಿ ಆಯ್ಕೆ

0

ಬಳ್ಪ ಗ್ರಾಮದ ಎಣ್ಣೆಮಜಲುಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು ಪಿಎಂ ಶ್ರೀ ಶಾಲೆಯಾಗಿ ಆಯ್ಕೆಯಾಗಿದೆ. ಪಿಎಂ ಶ್ರೀ ಯೋಜನೆಯು ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು, ಐದು ವರ್ಷಗಳ ಅವಧಿ ನಿಗದಿಯಾಗಿರುತ್ತದೆ. ಪಿಎಂ ಶ್ರೀ ಶಾಲೆಗಳು ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಎಲ್ಲಾ ಅಂಶಗಳನ್ನು ಪ್ರದರ್ಶಿಸುವ ಮಾದರಿ ಶಾಲೆಗಳಾಗಿರುತ್ತವೆ. ದ.ಕ. ಜಿಲ್ಲೆಯಲ್ಲಿ ಪಿಎಂಶ್ರೀ ಯೋಜನೆಗೆ ಆಯ್ಕೆಯಾದ ಏಕೈಕ ಕಿರಿಯ ಪ್ರಾಥಮಿಕ ಶಾಲೆ ಎಣ್ಣೆಮಜಲು ಶಾಲೆ ಆಗಿದೆ.