ಪಾಲಡ್ಕ ಅಪಘಾತ : ಮೃತ ವಿದ್ಯಾರ್ಥಿಯ ಪಾರ್ಥೀವ ಶರೀರ ಹುಟ್ಟೂರಿಗೆ

0

ಕಾರು ಚಾಲಕನ ಮೇಲೇ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ನಿನ್ನೆ ರಾತ್ರಿ ಸುಳ್ಯ ಸಮೀಪದ ಪಾಲಡ್ಕದಲ್ಲಿ ಸಂಭವಿಸಿದ ಕಾರು ಮತ್ತು ಬೈಕ್ ನಡುವಿನ ಅಪಘಾತದಲ್ಲಿ ಮೃತ ಪಟ್ಟ ಬೈಕ್ ಸವಾರ ಸ್ವರೂಪ್ ಅವರ ಮೃತ ದೇಹವನ್ನು ಸುಳ್ಯ ಕೆವಿಜಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬದವರು ಅವರ ಊರಾದ ಚಿಕ್ಕಬಳ್ಳಾಪುರಕ್ಕೆ ಕೊಂಡೊಯ್ದಿದ್ದಾರೆ.

ಅಪಘಾತ ಘಟನೆಗೆ ಸಂಬಂಧಿಸಿ ಕಾರು ಚಾಲಕನ ಮೇಲೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸಹಸವಾರ ಸಂಭ್ರಮ್ ಸುಳ್ಯ ಪೊಲೀಸ್‌ ಠಾಣೆಯಲ್ಲಿ ಕಾರು ಚಾಲಕನ ಮೇಲೆ ದೂರು ನೀಡಿದ್ದು, ದೂರು ಸ್ವೀಕರಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

” ನಾನು ಸುಳ್ಯದ ಕೆವಿಜಿ ಆಯುರ್ವೇದಿಕ್‌ ಮೆಡಿಕಲ್‌ ಕಾಲೇಜಿನಲ್ಲಿ BAMS ವ್ಯಾಸಂಗ ಮಾಡಿಕೊಂಡಿದ್ದು, ಸುಳ್ಯದ ಜೂನಿಯರ್‌ ಕಾಲೇಜಿನ ಬಳಿಯಿರುವ ಬ್ಯಾಹ್ಮೀಣ್ಸ್‌ ಹಾಸ್ಟೇಲ್‌ನಲ್ಲಿ ಉಳಕೊಳ್ಳುತ್ತಿದ್ದೇನೆ. ಮೇ 22 ರಂದು ನನ್ನ ಮೋಟಾರ್‌ ಸೈಕಲಿನಲ್ಲಿ ನನ್ನ ಸ್ನೇಹಿತ ಸ್ವರೂಪ್‌ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಸಂಪಾಜೆಗೆಂದು ಹೊರಟು ಮಾಣಿ ಮೈಸೂರು ಹೆದ್ದಾರಿಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿದ್ದೆವು.
ಈ ಸಂದರ್ಭ ಸಮಯ ಸುಮಾರು 7-15 ಗಂಟೆಗೆ ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ಪಾಲಡ್ಕ ಎಂಬಲ್ಲಿ ತಲುಪಿದಾಗ ಮಡಿಕೇರಿ ಕಡೆಯಿಂದ ಸುಳ್ಯ ಕಡೆಗೆ ಕಾರೊಂದನ್ನು ಅದರ ಚಾಲಕನು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ನಾನು ಸವಾರಿ ಮಾಡುತ್ತಿದ್ದ ಮೋಟಾರ್‌ ಸೈಕಲಿನ ಬಲಬದಿಗೆ ಡಿಕ್ಕಿ ಉಂಟು ಮಾಡಿದ್ದಾರೆ.


ಪರಿಣಾಮ ನಾನು ಮತ್ತು ಸ್ನೇಹಿತ ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದಿದ್ದು ಕೂಡಲೇ ಸ್ಥಳೀಯರು ಉಪಚರಿಸಿ ನೋಡಿದಾಗ ನನ್ನ ಪಕ್ಕೆಲುಬಿಗೆ ತರಚಿದ ಗಾಯ, ಬಲಕೈಗೆ ಗುದ್ದಿದ ನೋವು ಗಾಯವಾಗಿದ್ದು, ಸ್ವರೂಪ್‌ ನ ತಲೆಗೆ ಗಾಯವಾಗಿದ್ದು, ಪ್ರಜ್ಞೆ ತಪ್ಪಿತ್ತು. ಆಗ ಅಲ್ಲಿಗೆ ಬಂದ ನಮ್ಮ ಸ್ನೇಹಿತರಾದ ಪ್ರಜ್ವಲ್‌, ಮನೋಜ್‌, ಅಜಯ್‌, ಜೀವನ್‌ ಎಂಬವರು ಅವರನ್ನು ಅಂಬ್ಯಲೆನ್ಸ್‌ ನಲ್ಲಿ ಚಿಕಿತ್ಸೆಗಾಗಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಸ್ವರೂಪ್‌ ನನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ದೃಢಪಡಿಸಿದ್ದು, ನನಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಬಳಿಕ ನನ್ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಸುಳ್ಯ ಕೆವಿಜಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಲಾಗಿದೆ . ಅಪಘಾತ ಉಂಟು ಮಾಡಿದ ಕಾರಿನ ನಂಬ್ರವನ್ನು ರಸ್ತೆಯಲ್ಲಿ ಸಂಚರಿಸುವ ಇತರ ವಾಹನಗಳ ಬೆಳಕಿನಲ್ಲಿ ನೋಡಿದ್ದು, ಅದರ ನೋಂದಣಿ ನಂಬ್ರ KL14J2790 ಆಗಿದ್ದು, ವ್ಯಾಗನರ್‌ ಕಾರು ಆಗಿದೆ. ಚಾಲಕನ ಹೆಸರು ಸತೀಶ್‌ ಎಂಬುದಾಗಿದ್ದು, ಮುಂದಕ್ಕೆ ನೋಡಿದರೆ ಗುರುತಿಸುವುದಾಗಿಯೂ, ಈ ಅಪಘಾತಕ್ಕೆ KL14J2790 ನೇ ಕಾರು ಚಾಲಕ ತನ್ನ ಕಾರನ್ನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಡಿಕ್ಕಿಉಂಟು ಮಾಡಿರುವುದೇ ಕಾರಣವಾಗಿದ್ದು, ಆತನ ಮೇಲೆ ಸೂಕ್ತ ಕಾನೂನು ಕ್ರಮಕ್ಕಾಗಿ ಕೋರಿಕೆ ಮಾಡುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.’