ಗುತ್ತಿಗಾರು : ಕಿರಣ ಯೋಗ ತರಬೇತಿ ಶಿಬಿರದ ಸಮಾರೋಪ ಸಮಾರಂಭ

0

ಬೆಳಿಗ್ಗೆ ಬೇಗ ಏಳುವುದೂ ಒಂದು ಯೋಗ : ಶ್ರೀ ಬಿ.ಕೆ ಬೆಳ್ಯಪ್ಪ ಗೌಡ

ಗುಣಾತ್ಮಕ ಕಾರ್ಯಕ್ರಮದ ಗುರಿ : ಯೋಗೀಶ್ ಹೊಸೊಳಿಕೆ

ಗುತ್ತಿಗಾರಿನ ಕಿರಣ ರಂಗ ಅಧ್ಯಯನ ಸಂಸ್ಥೆಯ ವತಿಯಿಂದ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಒಂದು ವಾರಗಳ ಕಾಲ ನಡೆದ ಯೋಗ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಮೇ.20 ರಂದು ನಡೆಯಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಬಿ.ಕೆ ಬೆಳ್ಯಪ್ಪ ಗೌಡ ರವರು ಮಾತನಾಡುತ್ತಾ “ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಬೆಳಿಗ್ಗೆ ಬೇಗ ಏಳುವುದೂ ಒಂದು ಯೋಗ, ಸಮಯಕ್ಕೆ ಸರಿಯಾಗಿ ನಿದ್ರೆ, ಕೆಲಸ, ಆಹಾರ ಸೇವನೆ ಬಹಳ ಮುಖ್ಯ” ಎಂದರು.

ಯೋಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಹನೀಕ್ಷಾ.ಎಸ್.ಆರ್, ಜಿಶಾ.ಕೆ.ಕೆ, ಅನ್ವಿತಾ ಶೆಟ್ಟಿ ಹಾಗೂ ಯೋಗ ಶಿಕ್ಷಕರಾದ ಶರತ್ ಮರ್ಗಿಲಡ್ಕ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಶಂಖಶ್ರೀ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಸರೋಜಿನಿ ಗಂಗಯ್ಯ ಮುಳುಗಾಡು ಸನ್ಮಾನಿತರನ್ನು ಸನ್ಮಾನಿಸಿದರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಯಿಕುಳಿ ಇಲ್ಲಿನ ಮುಖ್ಯ ಗುರುಗಳಾದ ಮಾಧವ ಮೂಕಮಲೆ ಹಾಗೂ ನಿವೃತ್ತ ಯೋಧ ಸೋಮಶೇಖರ ಮಾವಾಜಿ ಮುಖ್ಯಅತಿಥಿಗಳಾಗಿ ಮಾತನಾಡಿದರು.


ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು. ಭಾಗವಹಿಸಿದ ಶಿಬಿರಾರ್ಥಿಗಳಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ರಾಜೇಶ್ ಮಾವಿನಕಟ್ಟೆ, ಸಾತ್ವಿಕ್ ಹೊಸೋಳಿಕೆ ಅನಿಸಿಕೆ ಹಂಚಿಕೊಂಡರು. ಕಿರಣ ರಂಗ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಯೋಗೀಶ್ ಹೊಸೊಳಿಕೆ ಸ್ವಾಗತಿಸಿ “ಆಡಂಬರದ ಕಾರ್ಯಕ್ರಮದ ಬದಲಾಗಿ ಸರಳವಾಗಿ ಗುಣಾತ್ಮಕವಾಗಿರುವ ಕಾರ್ಯಕ್ರಮದ ಗುರಿಯನ್ನು ಸಂಸ್ಥೆ ಹೊಂದಿದೆ” ಎಂದು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹನೀಕ್ಷಾ.ಎಸ್.ಆರ್ ಪ್ರಾರ್ಥಿಸಿದರು.