ಸುಳ್ಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಆಸನಗಳ ಕೊರತೆ

0

ಮುರಿದುಹೋದ ಆಸನಗಳ ಜೋಡಣೆಗೆ ಅಧಿಕಾರಿಗಳಿಂದ ಮೀನಾ ಮೇಷ ಎಣಿಕೆ

ಸುಳ್ಯ ಕೆಎಸ್ಆರ್ಟಿಸಿ ಬಸ್ಸು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಸನಗಳ ಕೊರತೆ ಎದ್ದು ಕಾಣುತ್ತಿದೆ. ಬಸ್ಸು ನಿಲ್ದಾಣದಲ್ಲಿ ಬೆಂಗಳೂರು ಮೈಸೂರು ಮಡಿಕೇರಿ ಕಡೆ ಸಾಗುವ ಫ್ಲಾಟ್ ಫಾರಂ ಮುಂಭಾಗದಲ್ಲಿ ಕಳೆದ ಹಲವಾರು ತಿಂಗಳುಗಳಿಂದ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಸನಗಳ ಸಂಖ್ಯೆ ಕಡಿಮೆಯಾಗುತ್ತಾ ಬಂದಿದ್ದು ಇದೀಗ ಕೇವಲ ಎರಡು ಮೂರು ಸೆಟ್ಟುಗಳು ಮಾತ್ರ ಬಾಕಿಯಾಗಿದೆ. ಈ ಪ್ಲಾಟ್ಫಾರ್ಮ್ ನಲ್ಲಿ ದಿನನಿತ್ಯ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು ಪ್ರಯಾಣಿಕರು ತಮ್ಮ ಬಳಿ ಇರುವ ಲಗೇಜ್ ಮತ್ತು ಸಣ್ಣಪುಟ್ಟ ಮಕ್ಕಳನ್ನು ಗಂಟೆಗಟ್ಟಲೆ ನಿಲ್ಲಿಸಿ ಬಸ್ಸನ್ನು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಒಂದು ವರ್ಷಗಳ ಹಿಂದಿನಿಂದ ಒಂದೊಂದೇ ಆಸನಗಳು ತುಂಡಾಗುತ್ತಾ ಬರುತ್ತಿದ್ದು ದಿನ ಕಳೆದಂತೆ ಇದೀಗ ಸಂಪೂರ್ಣ ಮಾಯವಾಗಿದೆ.

ಒಟ್ಟಾರೆಯಾಗಿ ಆಡಳಿತ ಪಕ್ಷಗಳು ಬದಲಾಗುತ್ತದೆ, ಜನಪ್ರತಿನಿಧಿಗಳು ಬದಲಾಗುತ್ತಾರೆ.ಆದರೆ ಓಟು ಪಡೆದು ಅಧಿಕಾರಕ್ಕೆ ಏರುವ ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಸಾರ್ವಜನಿಕರ ಈ ರೀತಿಯ ಸಮಸ್ಯೆಗಳನ್ನು ಕಣ್ಣಿಗೆ ಕಂಡರೂ ಕಾಣದಂತೆ ವರ್ತಿಸುತ್ತಿರುವುದು ವಿಪರ್ಯಾಸವೇ ಸರಿ.