Home ಪ್ರಚಲಿತ ಸುದ್ದಿ ಅರಂಬೂರು : ಗುಜರಿ ತುಂಬಿದ್ದ ಲಾರಿಗೆ ಬೆಂಕಿ

ಅರಂಬೂರು : ಗುಜರಿ ತುಂಬಿದ್ದ ಲಾರಿಗೆ ಬೆಂಕಿ

0

ಅಗ್ನಿ ಅಗ್ನಿಶಾಮಕ ಸಿಬ್ಬಂದಿಯವರಿಂದ ಬೆಂಕಿ ನಂದಿಸುವ ಕಾರ್ಯ

ಸುಳ್ಯ ಅರಂಬೂರು ಸಮೀಪ ಗುಜರಿ ಸಾಮಾನುಗಳನ್ನು ತುಂಬಿದ ಲಾರಿಯೊಂದಕ್ಕೆ ಬೆಂಕಿ ಅವಘಡ ಸಂಭವಿಸಿದ್ದು ಅಗ್ನಿಶಾಮಕ ಸಿಬ್ಬಂದಿಯವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿರುವುದಾಗಿ ತಿಳಿದುಬಂದಿದೆ.

ಸುಳ್ಯದಿಂದ ಗುಜುರಿ ಸಾಮಾನು ತುಂಬಿಸಿಕೊಂಡು ಮೈಸೂರಿಗೆ ತೆರಳುತ್ತಿದ್ದ ಲಾರಿಯಲ್ಲಿ ಅರುಂಬೂರು ಸಮೀಪಿಸುತ್ತಿದ್ದಂತೆ ಸಣ್ಣದಾಗಿ ಬೆಂಕಿ ಕಾಣಿಸತೊಡಗಿದೆ. ಇದನ್ನು ಕಂಡ ಲಾರಿ ಚಾಲಕ ವಾಹನವನ್ನು ಅರಂಬೂರು ಸಮೀಪವಿರುವ ಸರ್ವಿಸ್ ಸ್ಟೇಷನ್ ಒಳಭಾಗಕ್ಕೆ ಕೊಂಡೊಯ್ದು ನೀರು ಹಾಯಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ.

ಆದರೆ ನೀರು ಸಾಕಾಗದ ಕಾರಣ ಸುಳ್ಯ ಅಗ್ನಿಶಾಮಕದಳದವರಿಗೆ ಮಾಹಿತಿ ನೀಡಿದ್ದು ಅಗ್ನಿಶಾಮಕ ಸಿಬ್ಬಂದಿಯವರು ಕೂಡಲೇ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ.


ಲಾರಿ ಚಾಲಕನ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ಒಂದು ತಪ್ಪಿದಂತಾಗಿದೆ.

NO COMMENTS

error: Content is protected !!
Breaking