ಆಸ್ಪತ್ರೆಗೆ ಕೊಂಡೊಯ್ಯಲು ಹೋಗಿದ್ದೆ, ಆದರೆ ಇದೀಗ ರಾಜಕೀಯ ತಿರುವು ಪಡೆದಿದೆ : ಸತೀಶ್ ಟಿ.ಎನ್. ಹೇಳಿಕೆ
ಕೊಲ್ಲಮೊಗ್ರುವಿನ ಕಟ್ಟದಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸತೀಶ್ ಟಿ.ಎನ್. ಹೇಳಿಕೆ ನೀಡಿದ್ದು, ರಾಜಕೀಯಗೊಳಿಸಿದವರಿಗೆ ದೇವರು ತಕ್ಕ ಶಾಸ್ತಿ ನೀಡಲಿ ಎಂದು ಹೇಳಿದ್ದಾರೆ.
” ನನಗೆ ಮೇ.೨೭ ಬೆಳಗ್ಗೆ ೧೦ ಗಂಟೆಗೆ ಮಣಿಕಂಠ ಕಟ್ಟರವರು ಕರೆ ಮಾಡಿ ಕುಮಾರ ಕಟ್ಟ ಅವರಿಗೆ ಮಾನಸಿಕ ಆಗಿದೆ. ನೀವು ಬರಬೇಕು ಆಸ್ಪತ್ರೆಗೆ ಕೊಂಡೊಯ್ಯಲು ಇದೆ ಎಂದರು, ಹಾಗೆ ನಾನು ಅಲ್ಲಿಗೆ ತೆರಳುವಾಗ ಕಲ್ಮಕಾರಿನಿಂದ ಸುಂದರ ಗುಡ್ಡನ ಮನೆ ಹಾಗೂ ದುರ್ಗದಾಸ್ ಬಂಬಿಲ ಅವರಲ್ಲಿ “ವಿಷಯ ತಿಳಿಸಿ ಕರೆದುಕೊಂಡು ಹೋಗಿದ್ದೆ ಆದರೆ ಅಲ್ಲಿಗೆ ತಲುಪಿದ ನಂತರ ಸುಂದರ ಗುಡ್ಡನ ಮನೆಯವರು ನಾನು ಗುತ್ತಿಗಾರಿಗೆ ಹೋಗಲು ಇದ್ದ ಕಾರಣ ಅವರನ್ನು ಹರಿಹರದಲ್ಲಿ ಬಿಟ್ಟು ಮತ್ತೆ ಕಟ್ಟ ಮಣಿಕಂಠರ ಮನೆಗೆ ಬಂದಿರುತ್ತೇನೆ. ಅದೇ ಸಮಯದಲ್ಲಿ ಕುಮಾರ ಕಟ್ಟರವರು ಅಲ್ಲಿಗೆ ಬಂದು ಅವರ ವಯಕ್ತಿಕ ವಿಷಯದಲ್ಲಿ ಮಾತು ಬೆಳೆದು ನೂಕಾಟ ತಳ್ಳಾಟದಲ್ಲಿ ಕುಮಾರ್ ಅವರ ತಲೆಗೆ ಪೆಟ್ಟು ಬಿದ್ದಾಗ ನಾನು ಗುತ್ತಿಗಾರಿನ ಅಂಬ್ಯುಲೆನ್ಸ್ ಬರಲು ಹೇಳಿ ಮಾನವೀಯತೆಯಿಂದ ಅವರನ್ನು ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ್ದೇನೆ. ಅವರ ಮನೆಯವರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದೇನೆ. ನಂತರ ಕುಮಾರ್ ಅವರ ಭಾವನ ಫೋನ್ ನಂಬರ್ ಆಸ್ಪತ್ರೆಯಲ್ಲಿ ನೀಡಿ ನಾವು ಬಂದಿದ್ದೆವು. ಆದರೆ ನಾವು ಬಂದ ನಂತರ ನನ್ನ ವಿರೋಧಿಗಳೆಲ್ಲರು ಸೇರಿ ನಾನೇ ಅವರಿಗೆ ಹಲ್ಲೆ ಮಾಡಿದ ಆರೋಪ ಹೊರಿಸಿದ್ದಾರೆ. ಪ್ರಕರಣಕ್ಕೆ ರಾಜಕೀಯ ತಿರುವು ತಂದು ನಾವು ಮಾಡುವ ಸಾಮಾಜಿಕ ಸೇವೆಗೆ ಚ್ಯುತಿ ಉಂಟು ಮಾಡಿದ್ದಾರೆ. ಇದರಲ್ಲಿ ರಾಜಕೀಯ ಮಾಡಿರುವುದು ಬೇಸರ ತಂದಿದೆ, ಆದರೆ ಘಟನೆ ಸಂದರ್ಭದಲ್ಲಿ ಸ್ಥಳದಲ್ಲಿ ಇರದ ಸುಂದರ ಗುಡ್ಡನ ಮನೆ ಅವರ ಮೇಲೆಯೂ ಕೇಸು ದಾಖಲಿಸಿರುವುದು ಆಶ್ಚರ್ಯ ತಂದಿದೆ. ನನ್ನ ಮೇಲೆಯೂ ವೃತಾ ಆರೋಪ ಮಾಡಿರುವರಿಗೆ ಕಾರಣಿಕ ದೇವರ ಮೊರೆ ಹೋಗಲು ತೀರ್ಮಾನಿಸಿದ್ದೇನೆ.
ನಾನು ಸಾರ್ವಜನಿಕ ನೆಲೆಯಲ್ಲಿ ಕೆಲಸ ಮಾಡುವುದೇ ಹೊರತು ರಾಜಕೀಯ ಉದ್ದೇಶವಿಲ್ಲ” ಎಂದು ಸತೀಶ್ ಟಿ.ಎನ್. ಸುದ್ದಿಗೆ ಹೇಳಿಕೆ ನೀಡಿದ್ದಾರೆ.