ತಾಲೂಕು ಕ್ರೀಡಾಂಗಣ : ದೊಡ್ಡ ಸಮಸ್ಯೆಯಾಗಿದೆ – ಸರಿಪಡಿಸಿಆರಂಭಿಸಿದ ಕೆಲಸ 2- 3 ವರ್ಷದಲ್ಲಿ ಮುಗಿಯಬೇಕು – ಅಧಿಕಾರಿಗಳು ಪ್ರಯತ್ನ ಪಡಬೇಕು : ಶಾಸಕಿ ಭಾಗೀರಥಿ ಮುರುಳ್ಯ

0

ತಾಲೂಕು ಕ್ರೀಡಾಂಗಣ ದೊಡ್ಡ ಸಮಸ್ಯೆಯಾಗಿದೆ. ಅಲ್ಲಿ ಮಣ್ಣು ಜರಿಯುತ್ತಿದೆ ಎಂಬ ದೂರುಗಳಿವೆ. ಸ್ಥಳೀಯರಿಗೆ ಸಮಸ್ಯೆ ಆಗದಂತೆ ಅದನ್ನು ಸರಿಪಡಿಸಿ ಎಂದು ಶಾಸಕಿ ಭಾಗೀರಥಿ ಮುರುಳ್ಯ ಸೂಚನೆ ನೀಡಿದ್ದಾರೆ.


ಮೇ.31ರಂದು ಸುಳ್ಯ ತಾಲೂಕು ಪಂಚಾಯತ್‌ನಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ನಿರ್ಮಿತಿ ಕೇಂದ್ರ ಇಂಜಿನಿಯರ್‌ರಿಗೆ ಸೂಚನೆ ನೀಡಿದರು.


ನಿರ್ಮಿತಿ ಕೇಂದ್ರದ ಇಂಜಿನಿಯರ್ ಹರೀಶ್ ಮೆದು ಇಲಾಖೆಯ ಪ್ರಗತಿ ವರದಿ ನೀಡಿದರು. ತಾಲೂಕು ಅಂಬೇಡ್ಕರ್ ಭವನ ಕಾಮಗಾರಿ ಹಾಗೂ ಸುಳ್ಯ ತಾಲೂಕು ಕ್ರೀಡಾಂಗಣ ಮುಂದುವರಿದ ಕಾಮಗಾರಿ ಎಂದು ಹೇಳಿದರಲ್ಲದೆ, ಅನುದಾನ ಕೊರತೆ ಇದೆ ಎಂದು ಹೇಳಿದರು. ಆಗ ಶಾಸಕಿ ಭಾಗೀರಥಿಯವರು ತಾಲೂಕು ಕ್ರೀಡಾಂಗಣ ದೊಡ್ಡ ಸಮಸ್ಯೆಯಾಗಿದೆ.

ಅದನ್ನು ಹೇಗೆ ಸರಿಪಡಿಸಬಹುದು. ಜನರಿಗೆ ತೊಂದರೆಯಾಗದಂತೆ ಪರಿಹಾರ ತಿಳಿಸಿ ಎಂದು ಹೇಳಿದಾಗ, ಮಾಜಿ ಸಚಿವರು ಹಾಗೂ ದೃಹಿಕ ಶಿಕ್ಷಣ ನಿರ್ದೇಶಕರುಗಳ ಸಲಹೆಯಂತೆ ಟ್ರ್ಯಾಕ್ ಮಾಡಲಾಗಿದೆ. ಕ್ರೀಡಾಂಗಣ ಅಗಲ ಮಾಡುವಾಗ ಮಣ್ಣು ಹಾಕಲಾಗಿದ್ದು ಅದು ಮಳೆ ನೀರಿಗೆ ಸಮಸ್ಯೆಯಾಗಿದೆ. ಈಗ ಮೋರಿ ಅಳವಡಿಕೆ, ಸ್ಟೆಪ್ ರಚನೆ ಮಾಡಲಾಗಿದೆ ಎಂದು ಇಂಜಿನಿಯರ್ ಹೇಳಿದರು. ಮೋರಿ ಅಳವಡಿಸಿದ್ದಲ್ಲಿ ಛೇಂಬರ್ ಕೆಲಸ ಮಾಡಿಲ್ಲ'' ಎಂದು ಸಭೆಯಲ್ಲಿದ್ದ ಪತ್ರಕರ್ತರು ಶಾಸಕರ ಗಮನಕ್ಕೆ ತಂದರು.

ಸಭೆಯಲ್ಲಿದ್ದ ನ.ಪಂ. ಮಾಜಿ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕರಲ್ಲಿ ಶಾಸಕಿಯವರು ಅಭಿಪ್ರಾಯ ಕೇಳಿದಾಗ,ಸ್ಪಷ್ಟ ಚಿತ್ರಣ ಇಲ್ಲದೆ ಕೆಲಸ ಮಾಡಲಾಗಿದೆ. ಆದ್ದರಿಂದ ಈ ಸಮಸ್ಯೆ ಆಗಿರುವುದು ಎಂದು ಅವರು ತಿಳಿಸಿದರು. ನೀವು ಅಧಿಕಾರಿಗಳಿದ್ದೀರಿ. ಅದನ್ನು ಹೇಗೆ ಸರಿ ಪಡಿಸಬೇಕೆಂದು ನೀವು ಮಾಡಬೇಕು. ಒಂದು ಕೆಲಸ ಆರಂಭವಾದರೆ ಅದು ಹೀಗೆ ದೂಡಿಕೊಂಡು ಹೋಗುವುದಲ್ಲ. ೨ – ೩ ವರ್ಷದಲ್ಲಿ ಮುಗಿಯಬೇಕು. ನೀವು ಪ್ರಯತ್ನ ಪಟ್ಟು ಕೆಲಸ ಮಾಡಿ ಎಂದು ಶಾಸಕರು ಸೂಚನೆ ನೀಡಿದರು.


ಸಿಬ್ಬಂದಿಗಳ ಕೊರತೆ : ಸಭೆಯಲ್ಲಿದ್ದ ಅಧಿಕಾರಿಗಳು ಇಲಾಖೆಗಳಲ್ಲಿ ಸಿಬ್ಬಂದಿಗಳ ಕೊರತೆಯ ಕುರಿತು ಶಾಸಕರ ಗಮನ ಸೆಳೆದರು.