ಪುತ್ತೂರು ಸಹಾಯಕ ಕಮಿಷನರ್ ಆಗಿರುವ ಎಸಿ ಗಿರೀಶ್ ನಂದನ್ ರವರ ಮೇಲೆ ಅವರ ಹಿಂದಿನ ಅವಧಿಯಲ್ಲಿ ಸಕಲೇಶಪುರದ ಎತ್ತಿನಹೊಳೆ ಪ್ರಾಜೆಕ್ಟ್ ನಲ್ಲಿ ಹೈಕೋರ್ಟಿನಲ್ಲಿ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ತಪ್ಪಾಗಿ ಕೋರ್ಟಿಗೆ ಪ್ರಮಾಣ ಪತ್ರವನ್ನು ಸಲ್ಲಿಸಿದ್ದಾರೆಂದು ಸರಕಾರದ ಅಧೀನ ಕಾರ್ಯದರ್ಶಿಯವರು ಗಿರೀಶ್ ನಂದನ್ ರ ಮೇಲೆ ಇಲಾಖೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲು ಶಿಫಾರಸು ಮಾಡಿದ್ದರು.
ಇದನ್ನು ಪ್ರಶ್ನಿಸಿ ಪ್ರಸ್ತುತ ಪುತ್ತೂರು ಸಹಾಯ ಕಮಿಷನರ್ ಗಿರಿಸನಂದನ್ ರವರು ಕೆಎಟಿಗೆ ಅಪೀಲ್ ಸಲ್ಲಿಸಿ ತಡೆಯಾದೆಯನ್ನು ಕೋರಿದ್ದರು. ಜೂನ್ 3ರಂದು ಕೆಎಟಿ ನ್ಯಾಯಾಧೀಕರಣ ಎಸಿ ಯವರ ಮನವಿಯನ್ನು ಪುರಸ್ಕರಿಸಿ ಸರಕಾರದ ಆದೇಶಕ್ಕೆ ತಡೆಯಾಜ್ಞೆಯನ್ನು ನೀಡಿ ಪ್ರಕರಣವನ್ನು ಮುಂದೂಡಿದ್ದಾರೆ. ಎಸಿ ಗಿರೀಶ್ ನಂದನ್ ರವರ ಪರವಾಗಿ ನ್ಯಾಯವಾದಿ ವಿಘ್ನೇಶ್ವರ ಯು ವಾದಿಸಿದ್ದರು.