ಸಂಪಾಜೆ ಮೂಲಭೂತ ಸೌಕರ್ಯಗಳ ಹಿತರಕ್ಷಣಾ ವೇದಿಕೆ ಸಂಕಲ್ಪ
ಸಂಪಾಜೆ ನದಿ ಹೂಳೆತ್ತುವ ಪ್ರಕ್ರಿಯೆ ನಡೆಸಲು ಆಗ್ರಹ
ಸಂಪಾಜೆ ಗ್ರಾಮದಲ್ಲಿ ವಾಸಿಸುವ ಜನರಲ್ಲಿ ಭೂಮಿ ಇದೆ. ಆದರೆ ಅದಕ್ಕೆ ಸರಿಯಾದ ದಾಖಲೆಗಳಿಲ್ಲ. ಇದರಿಂದಾಗಿ ಸರಕಾರದ ಸವಲತ್ತುಗಳು ಸೇರಿದಂತೆ ಇನ್ನಿತರ ಸೌಲಭ್ಯ ಪಡೆಯಲು ಸಾಧ್ಯವಾಗದೇ ಇರುವುದರಿಂದ ಪ್ಲಾಟಿಂಗ್ ಸಹಿತ ಭೂ ದಾಖಲೆಗಳ ಸಮಸ್ಯೆ ಬಗೆ ಹರಿಸಲು ಹೋರಾಟ ನಡೆಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಗ್ರಾಮದ ಸಮಾನ ಮನಸ್ಕರನ್ನೊಳಗೊಂಡು ಸಮಿತಿಯನ್ನು ರಚನೆ ಮಾಡಿಕೊಂಡಿzವೆ ಎಂದು ಸಮಿತಿಯ ಸಂಚಾಲಕ ಸೋಮಶೇಖರ ಕೊಯಿಂಗಾಜೆ, ಅಧ್ಯಕ್ಷ ಕೆ.ಪಿ.ಜಾನಿ ಹೇಳಿದ್ದಾರೆ.
ಜೂ.೬ರಂದು ಸುಳ್ಯ ಪ್ರೆಸ್ ಕ್ಲಬ್ ಪತ್ರಿಕಾಗೋಷ್ಠಿ ನಡೆಸಿದ ಅವರು, ಸ್ವಾತಂತ್ರ್ಯ ಬಂದು ೭೫ ವರ್ಷಗಳು ಕಳೆದರೂ ಸಂಪಾಜೆ ನಾಗರೀಕರ ಮೂಲಭೂತ ಸಮಸ್ಯೆಗಳು ಹಾಗೆಯೇ ಇದೆ. ಇದು ಮುಂದಿನ ತಲೆಮಾರಿಗೆ ಸಮಸ್ಯೆಯಾಗಲಿದ್ದು ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಸಮಿತಿಯೊಂದನ್ನು ರಚಿಸಿಕೊಂಡಿದ್ದು ಆ ಮೂಲಕ ಹೋರಾಟ ಮಾಡಲಾಗುವುದು ಎಂದು ಅವರು ಹೇಳಿದರು.
ಎಲ್ಲರಲ್ಲಿಯೂ ಭೂಮಿ ಇದೆ. ಕೃಷಿಯೂ ಇದೆ. ಆದರೆ ಅದಕ್ಕೆ ಸರಿಯಾದ ದಾಖಲೆಗಳಿಲ್ಲ. ಜಾಗದ ಪ್ಲಾಟಿಂಗ್, ಕನ್ವರ್ಷನ್, ನೈನ್‌ಲೆವೆನ್ ಮಾಡಿಸಲು ಸಾಧ್ಯವಾಗದೇ ತೊಂದರೆ ಎದುರಿಸುತ್ತಿದ್ದಾರೆ. ಈ ಪ್ರಕ್ರಿಯೆಗಳಾಗದಿದ್ದರೆ ಸರಕಾರದ ಸವಲತ್ತು ಸಿಗೋದಿಲ್ಲ. ಸಾಲ ಪಡೆಯಲೂ ಆಗುತ್ತಿಲ್ಲ. ಸಂಪಾಜೆಯ ಸ್ಮಶಾನ ಭೂಮಿಯ ಸಮಸ್ಯೆ ಇತ್ಯರ್ಥ ಇನ್ನೂ ಆಗಿಲ್ಲ. ಸಂಪಾಜೆ ಭಾಗದ ಅರಣ್ಯ ಜಾಗಕ್ಕೆ ಹೊಂದಿಕೊಂಡಿರುವ ಜಮೀನಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕಂದಾಯ – ಅರಣ್ಯ ಇಲಾಖೆಯವರು ಜಂಟಿ ಸರ್ವೆ ನಡೆಸಿ ಗಡಿಗುರುತು ಮಾಡಬೇಕು. ನಿವೇಶನ ರಹಿತ ಫಲಾನುಭಿಗಳಿಗೆ ಇಂದಿಗೂ ವಾಸ ಮಾಡಲು ಸ್ವಂತ ಮನೆಯೇ ಇಲ್ಲ. ಈ ಸಮಸ್ಯೆಗೆ ಪರಿಹಾರ ಆಗಬೇಕಾಗಿದೆ. ದಾಖಲೆ ಸರಿಪಡಿಸಲು ಇಲಾಖೆಗೆ ಸುತ್ತಾಡಿದರೂ ಕೆಲಸಗಳು ಆಗುತ್ತಿಲ್ಲ. ಅಧಿಕಾರಿಗಳು ಏನೇನೋ ಸಬೂಬು ಹೇಳಿಕೊಂಡು ಅಲೆದಾಡಿಸುವ ಸ್ಥಿತಿ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಮುಕ್ತವಾಗಿ ಕೆಲಸ ಆಗಬೇಕು. ಅದಕ್ಕಾಗಿ ಕಂದಾಯ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿzವೆ. ಮತ್ತು ಶಾಸಕರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲೂಕು ಕಚೇರಿಗೆ ಹೋಗಿ ಬಾಕಿ ಯಿರುವ ಕೆಲಸದ ಪರಿಶೀಲನೆ ನಡೆಸಬೇಕು ಎಂದು ಅವರು ಹೇಳಿದರು.
ತಮಿಳು ಜನಾಂಗದವರ ನಿವೃತ್ತಿ ನಂತರ ಅವರ ಬದುಕು ಅತಂತ್ರ ಸ್ಥಿತಿಗೆ ತಲುಪುತ್ತಿದ್ದು ಮೂಲಭೂತ ಅಗತ್ಯತೆಗಳಾದ ಪರಿತರ, ನಿವೇಶನ, ಸ್ಮಶಾನ, ವಿದ್ಯುತ್ ಅಗತ್ಯತೆಗಳಿಂದ ವಂಚಿಸಲ್ಪಡುತ್ತಿದ್ದು ಸಮಸ್ಯೆ ಬಗೆಹರಿಸಬೇಕು ಎಂದು ಅವರು ಹೇಳಿದರು.
ಅಡಿಕೆಗೆ ಹಳದಿ ರೋಗ ೧೯೬೮ನೇ ಇಸವಿಯಿಂದಲೇ ಕೇಳುತ್ತಿzವೆ. ಆದರೂ ಅದಕ್ಕೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಅದಕ್ಕಾಗಿ ವ್ಯವಸ್ಥಿತ ಹೋರಾಟ ಅಗತ್ಯವಿದೆ ಎಂದು ಸೋಮಶೇಖರ್ ಕೊಯಿಂಗಾಜೆ ಹೇಳಿದರು. ಸಂಪಾಜೆಯನ್ನು ಪೋಡಿ ಮುಕ್ತ ಗ್ರಾಮ ಎಂದು ಮಾಡಿದ್ದರು ಆದರೆ ಅದು ಇನ್ನೂ ಆಗಿಲ್ಲ. ಸಂಪಾಜೆಯ ನದಿ ಹೂಳೆತ್ತುವ ಪ್ರಕ್ರಿಯೆ ಆಗಬೇಕು ಗ್ರಾ.ಪಂ. ಈ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿದ್ದು ನಾವು ಅದಕ್ಕೆ ಬೆಂಬಲ ನೀಡುತ್ತಿzವೆ. ನದಿ ಹೂಳೆತ್ತುವುದೇ ನಮ್ಮ ಮೊದಲ ಆದ್ಯತೆ ಎಂದು ಅವರು ಹೇಳಿದರು.
ಜಾಗದ ವಿಚಾರಕ್ಕೆ ಸಂಬಂಧಿಸಿ ಅಧಿಕಾರಿಗಳು ಕೆಲಸ ಮಾಡಿದ್ದಾರೆ ಆದರು ಅದನ್ನು ಅಂತಿಮ ಹಂತಕ್ಕೆ ಕೊಂಡು ಹೋಗುತ್ತಿಲ್ಲ ಎಂದು ಸದಸ್ಯ ಮಹಮ್ಮದ್ ಕುಂಞಿ ಗೂನಡ್ಕ ಹೇಳಿದರು.
ವೇದಿಕೆಯ ಗೌರವಾಧ್ಯಕ್ಷ ಯು.ಬಿ.ಚಕ್ರಪಾಣಿ, ಉಪಾಧ್ಯಕ್ಷ ಸುಬ್ರಹ್ಮಣ್ಯ ಕದಿಕಡ್ಕ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಲಿಸ್ಸಿ ಮೊನಾಲಿಸಾ, ಸದಸ್ಯರಾದ ವಿಮಲಾ ಪ್ರಸಾದ್, ಶೌವಾದ್ ಗೂನಡ್ಕ, ವೇದಿಕೆಯ ಪ್ರಧಾನ ಕಾರ್ಯದರ್ಶಿ ವಸಂತ ಗೌಡ ಪೆಲ್ತಡ್ಕ, ಪದಾಧಿಕಾರಿಗಳಾದ ಎ.ಕೆ.ಇಬ್ರಾಹಿಂ, ಜ್ಞಾನಶೀಲನ್ ರಾಜು, ಸೆಬಾಸ್ಟಿಯನ್ ಉಪಸ್ಥಿತರಿದ್ದರು