ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಪ್ರಾಥಮಿಕ ವಿಭಾಗ – ಶಾಲಾ ಸಂಸತ್ತು ರಚನೆ

0

ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ, ಪ್ರಾಥಮಿಕ ವಿಭಾಗದಲ್ಲಿ ಶಾಲಾ ಸಂಸತ್ತನ್ನು ಚುನಾವಣೆಯ ಮೂಲಕ ರಚಿಸಲಾಯಿತು. ಜೂ.7 ರಂದು ಗೌಪ್ಯ ಮತದಾನದ ಮೂಲಕ ಚುನಾವಣೆಯನ್ನು ನಡೆಸಲಾಯಿತು. ಶಾಲಾ ಮುಖ್ಯ ಶಿಕ್ಷಕರಾದ ಮಾಯಿಲಪ್ಪ ಜಿ ಯವರ ಮಾರ್ಗದರ್ಶನದಲ್ಲಿ, ಶಾಲಾ ಶಿಕ್ಷಕರಾದ ರಾಜನಾಯಕ ಟಿ ಚುನಾವಣಾ ಅಧಿಕಾರಿಯಾಗಿ, ಶಿಕ್ಷಕರಾದ ಶ್ರೀಮತಿ ರಾಜೀವಿ ಅಧ್ಯಕ್ಷಾಧಿಕಾರಿಯಾಗಿ ಸಹಕರಿಸಿದರು. ಶ್ರೀಮತಿ ಶಾಂತಕುಮಾರಿ, ಶ್ರೀಮತಿ ದಿವ್ಯಲತಾ, ಕುಮಾರಿ ಅಕ್ಷತಾ, ಕುಮಾರಿ ಪೂರ್ವಿ ಎನ್ ರೈ, ಕುಮಾರಿ ಶುಭಶ್ರೀ ಚುನಾವಣಾ ಪ್ರಕ್ರಿಯೆಯಲ್ಲಿ ಸಹಕರಿಸಿದರು.


ಶಾಲಾ ಸಂಸತ್ತು ರಚನೆಯ ಅಂಗವಾಗಿ ನಡೆದ ಚುನಾವಣೆಯಲ್ಲಿ ಶಾಲಾ ಮುಖ್ಯಮಂತ್ರಿಯಾಗಿ ಪ್ರಥಮ್ ರೈ 7ನೇ ಆಂಗ್ಲ ಮಾಧ್ಯಮ ಹಾಗೂ ಶಾಲಾ ಉಪಮುಖ್ಯಮಂತ್ರಿಯಾಗಿ ಮಾನ್ವಿ ಕೆ ಎಸ್ ಕಣಿಲೆಗುಂಡಿ 6ನೇ ಆಂಗ್ಲ ಮಾಧ್ಯಮ ಇವರು ಆಯ್ಕೆಯಾಗಿರುತ್ತಾರೆ.


2023 – 24 ನೇ ಸಾಲಿನ ಶಾಲಾ ಮಂತ್ರಿಮಂಡಲ ಮುಖ್ಯಮಂತ್ರಿಯಾಗಿ ಪ್ರಥಮ್ ರೈ 7 ನೇ ತರಗತಿ,ಉಪಮುಖ್ಯಮಂತ್ರಿ ಮಾನ್ವಿ ಕೆ ಎಸ್ 6 ನೇ ತರಗತಿ, ಗೃಹ ಮಂತ್ರಿ ಕೌಶಿಕ್ 7 ನೇ ತರಗತಿ, ಉಪ ಗೃಹ ಮಂತ್ರಿ ಕಿಶನ್ 7 ನೇ ತರಗತಿ , ಶಿಕ್ಷಣ ಮಂತ್ರಿ ಅಂಶ್ರುತಾ ಎಂ 7 ನೇ ತರಗತಿ,ಉಪಶಿಕ್ಷಣ ಮಂತ್ರಿ ಸಿಂಚನ ಎಸ್ 7 ನೇ ತರಗತಿಸ್ವಚ್ಛತಾ ಮಂತ್ರಿ ಯಜತ್ ಆರ್ 7 ನೇ ತರಗತಿ,ಉಪ ಸ್ವಚ್ಛತಾ ಮಂತ್ರಿ ಮಾನ್ವಿ ರೈ 6 ನೇ ತರಗತಿ, ಪರಿಸರ ಮಂತ್ರಿ ಲಕ್ಷ್ಯಾ ಬಿ 7 ನೇ ತರಗತಿ, ಉಪ ಪರಿಸರ ಮಂತ್ರಿ ದೀಕ್ಷಾ ಕೆ 6 ನೇ ತರಗತಿ , ಶಿಸ್ತು ಮಂತ್ರಿ ಫಾತಿಮತ್ ಜುಲ್ಫಾ ಬಿ 7 ನೇ ತರಗತಿ, ಉಪ ಶಿಸ್ತು ಮಂತ್ರಿ ಎ ಕೆ ಮೇಘನ್ 6 ನೇ ತರಗತಿ,ಆರೋಗ್ಯ ಮಂತ್ರಿ ವೈಷ್ಣವಿ ಬಿ 7 ನೇ ತರಗತಿ,ಉಪ ಆರೋಗ್ಯ ಮಂತ್ರಿ ಪ್ರತಿಕ್ಷಾ 6 ನೇ ತರಗತಿ , ಕ್ರೀಡಾ ಮಂತ್ರಿ ಪರೀಕ್ಷಿತ್ ಎಸ್ ಆರ್ 7 ನೇ ತರಗತಿ ,ಉಪ ಕ್ರೀಡಾ ಮಂತ್ರಿ ವಿಖ್ಯಾತ್ 7 ನೇ ತರಗತಿ, ತಂತ್ರಜ್ಞಾನ ಮಂತ್ರಿ ದರ್ಶನ್ 7 ನೇ ತರಗತಿ, ಉಪ ತಂತ್ರಜ್ಞಾನ ಮಂತ್ರಿ ನವೀನ್ ಕುಮಾರ್ 6 ನೇ ತರಗತಿ, ಸಾಂಸ್ಕೃತಿಕ ಮಂತ್ರಿ ಶಾಲ್ಮಲಿ ಎನ್ 7 ನೇ ತರಗತಿ, ಉಪ ಸಾಂಸ್ಕೃತಿಕ ಮಂತ್ರಿ ದೀಪ್ತಿ ಕೆ 7 ನೇ ತರಗತಿ, ನೀರಾವರಿ ಮಂತ್ರಿ ಮಹಮ್ಮದ್ ಶಾಹಿಲ್ 7 ನೇ ತರಗತಿ,ಉಪ ನೀರಾವರಿ ಮಂತ್ರಿ ಚರಣ್ ರೈ 6 ನೇ ತರಗತಿ , ಕೃಷಿ ಮಂತ್ರಿ ಶ್ರೀಕಾಂತ್ 7 ನೇ ತರಗತಿ,ಉಪ ಕೃಷಿ ಮಂತ್ರಿ ದೇವಿಪ್ರಸಾದ್ 7 ನೇ ತರಗತಿ , ವಾರ್ತಾ ಮಂತ್ರಿ ಸ್ವಾತಿ 7 ನೇ ತರಗತಿ ,ಉಪ ವಾರ್ತಾ ಮಂತ್ರಿ ಶಿವಾನಿ 6 ನೇ ತರಗತಿ,ಸಭಾಪತಿ ಲಿಖಿತಾ 7 ನೇ ತರಗತಿ ,ವಿರೋಧ ಪಕ್ಷದ ನಾಯಕಿ ಹಿತಾಶ್ರೀ 7 ನೇ ತರಗತಿ
ಸದಸ್ಯರು ವಿಹಾರಿಕಾ ರಾಗಿಣಿ ನಾಯಕ್ 7 ನೇ ತರಗತಿ ಯಶಸ್ವಿ 7 ನೇ ತರಗತಿ ಹಿಪಾಜ್ ಯು ಇ 7 ನೇ ತರಗತಿ ಆಯ್ಕೆಯಾದರು.