ಸುಳ್ಯ ಅನ್ಸಾರಿಯದಲ್ಲಿ ಗಲ್ಫ್‌ ಸೆಂಟ್ರಲ್ ಸಮಿತಿ ಸಭೆ

0

ಅತೀ ಶೀಘ್ರದಲ್ಲಿ ಅನ್ಸಾರಿಯ ಶಾದಿಮಹಲ್ ಕಾಮಗಾರಿ ಪೂರ್ತಿಗೊಳಿಸಿ ಲೋಕಾರ್ಪಣೆ: ಎಜಿಸಿಸಿ

AGCC (ಅನ್ಸಾರಿಯಾ ಗಲ್ಫ್ ಸೆಂಟ್ರಲ್ ಸಮಿತಿ) ಇದರ ಅದೀನದಲ್ಲಿ ನಡೆಯುತ್ತಿರುವ ಶಾದಿಮಹಲ್ ಯೋಜನೆಯನ್ನು ವೀಕ್ಷಿಸಲು ಮತ್ತು ಇದರ ಪ್ರಗತಿಯ ಬಗ್ಗೆ ಚರ್ಚಿಸಲು ಅನ್ಸಾರಿಯ ಗಲ್ಪ್ ಸಮಿತಿ ಸಭೆ ಜೂ.13 ರಂದು ಅನ್ಸಾರಿಯಾ ಎಜುಕೇಶನ್ ಸೆಂಟರ್ ಸಭಾಂಗಣದಲ್ಲಿ ನಡೆಯಿತು.


  ಸಭೆಯಲ್ಲಿ ಅನ್ಸಾರಿಯದಲ್ಲಿ ನಿರ್ಮಾಣ ಹಂತದಲ್ಲಿರುವ ಶಾದಿಮಹಲ್ ಕಟ್ಟಡವನ್ನು ಅದಷ್ಷೂ ಬೇಗ ಪೂರ್ತಿಗೊಳಿಸುವ ಬಗ್ಗೆ ಚರ್ಚಿಸಲಾಯಿತು. ಅದೇ ರೀತಿ ಕಾಮಗಾರಿಯನ್ನು ಯೋಜನೆಯನ್ನು ಪೂರ್ಣಗೊಳಿಸಲು ಊರಿನವರ ಸಹಕಾರವ ಅತ್ಯಗತ್ಯ ಅದರಿಂದ ಊರಿನವರ ಸಹಾಕರದೊಂದಿಗೆ ಕಾಮಗಾರಿಯನ್ನು ಪೂರ್ತಿಗೊಳಿಸಿ ಮುಂದಿನ ನಾಲ್ಕೈದು ತಿಂಗಳಲ್ಲಿ ಲೋಕಾರ್ಪಣೆ ಮಾಡಬೇಕು ಎಂದು ಜಿಸಿಸಿ ಸಮಿತಿ ತೀರ್ಮಾನಿಸಲಾಯಿತು.


 
ಏಜೆಸಿಸಿ ಅಧ್ಯಕ್ಷರಾಗಿರುವ ಸಿ.ಪಿ ಶಮ್ಸ್ ರವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.ಅನ್ಸಾರಿಯ ಗಲ್ಪ್ ಸಮಿತಿ ಕೋಶಾಧಿಕಾರಿ ವಿ.ಕೆ ಮುನೀರ್ ಜಟ್ಟಿಪಳ್ಳ,ಅನ್ಸಾರಿಯ ದಮಾಮ್ ಸಮಿತಿಯ ಅಶ್ರಫ್ ಮರಸಂಕ ,ಅನ್ಸಾರಿಯ ಯುಎಇ ಸಮಿತಿ ಕಾಸೀಂ,ಅನ್ಸಾರಿಯ ಎಜಿಸಿಸಿ ಸಮಿತಿ ಸಂಯೋಜಕ ಹಾಜಿ ಹಮೀದ್ ಎಸ್ ಎಂ, ಅನ್ಸಾರಿಯ ಎಜುಕೇಶನ್ ಸೆಂಟರ್ ಅಧ್ಯಕ್ಷ ಅಬ್ದುಲ್‌ ಮಜೀದ್ ಜನತಾ, ಪ್ರಧಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ,ಕಾರ್ಯದರ್ಶಿ ಶರೀಫ್ ಜಟ್ಟಿಪಳ್ಳ,ಅನ್ಸಾರಿಯ ಕಟ್ಟಡ ನಿರ್ಮಾಣ ಉಸ್ತುವಾರಿ ಅಬ್ದುಲ್‌ ಖಾದರ್ ಹಾಜಿ ಪಟೇಲ್,ಅನ್ಸಾರ್ ಅಧ್ಯಕ್ಷ ಹಾಜಿ ಅಬ್ದುಲ್‌ ಶುಕೂರ್ ಮೊದಲಾದವರು ಉಪಸ್ಥಿತರಿದ್ದರು.
ಅನ್ಸಾರಿಯ ಎಜುಕೇಶನ್ ಸೆಂಟರ್ ವ್ಯವಸ್ಥಾಪಕ ಉವೈಸ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.