ಕಳಂಜ ಗ್ರಾಮ ಪಂಚಾಯತ್ ನ ಅಮೃತ ಅರೋಗ್ಯ ಅಭಿಯಾನದಡಿ ನರೇಗಾ ಯೋಜನೆಯ ಫಲಾನುಭವಿಗಳಿಗೆ ಹಾಗೂ ಗ್ರಾಮಸ್ಥರಿಗೆ ಅರೋಗ್ಯ ತಪಾಸಣಾ ಶಿಬಿರ ಇಂದು ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಆವರಣದಲ್ಲಿ ನಡೆಯಿತು.
ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಬೇಬಿ ಕೆ.ಸಿ, ಕಳಂಜ ಗ್ರಾಮ ವ್ಯಾಪ್ತಿಯ ಸಮುದಾಯ ಆರೋಗ್ಯಾಧಿಕಾರಿ ಶ್ರೀಮತಿ ಶಿಲ್ಪ ಎ.ಕೆ ಮತ್ತು ಆಶಾ ಕಾರ್ಯಕರ್ತೆ ಶ್ರೀಮತಿ ಜಯಂತಿ ಕಳಂಜ ಶಿಬಿರ ನಡೆಸಿಕೊಟ್ಟರು. ಗ್ರಾಮಸ್ಥರು ಶಿಬಿರದ ಪ್ರಯೋಜನ ಪಡೆದುಕೊಂಡರು.