ಜಾಲ್ಸೂರಿನ ಆರ್ತಾಜೆ ಸಣ್ಣಮನೆ ಡಾ.ರಕ್ಷಿತಾ ಟಿ. ಎನ್. ಇವರಿಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪ್ರದಾನ

0

ಜಾಲ್ಸೂರು ಆರ್ತಾಜೆ ಸಣ್ಣಮನೆಯ ಡಾ. ರಕ್ಷಿತಾ ಟಿ.ಎನ್. ಎಂಬವರು ಕೀಟ ಶಾಸ್ತ್ರ ವಿಭಾಗ ದಲ್ಲಿ ಸಂರಕ್ಷಿತ ಬೇಸಾಯದ ಅಡಿಯಲ್ಲಿ ಬೆಳೆಗಳ ಪರಾಗ ಸ್ಪರ್ಶಕ್ಕಾಗಿ ಮುಜಂಟಿ ಜೇನು ನೊಣದ ಬಳಕೆಯ ಕುರಿತಾದ ಅಧ್ಯಯನ ”Studies on utilization of stingless bees for pollination of crops under protected cultivation” ಎಂಬ ವಿಷಯದಲ್ಲಿ ಡಾ. ಎಸ್.ಟಿ. ಪ್ರಭುರವರ ಮಾರ್ಗದರ್ಶನದಲ್ಲಿ ಮಹಾ ಪ್ರಬಂಧವನ್ನ ಮಂಡಿಸಿದ ಪ್ರಯುಕ್ತ ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಇವರಿಗೆ ಪಿ.ಎಚ್.ಡಿ. ಪದವಿಯನ್ನು ಪ್ರದಾನ ಮಾಡಲಾಯಿತು.

ಇವರು ತಮ್ಮ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಬ್ಲೆಸ್ಡ್ ಕುರಿಯಕೋಸ್ ಗುತ್ತಿಗಾರು, ಪ್ರಾಥಮಿಕ ಶಿಕ್ಷಣವನ್ನು ಸಂತ, ಬ್ರಿಜಿಡ್ಸ್ ಹಿ.ಪ್ರಾ.ಶಾಲೆ ಸುಳ್ಯ, ಪ್ರೌಢಶಿಕ್ಷಣವನ್ನು ಸಂತ ಜೋಸಫ್ ಆಂಗ್ಲ ಮಾಧ್ಯಮ ಶಾಲೆ ಸುಳ್ಯ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡಿನಲ್ಲಿ ಪಡೆದಿರುತ್ತಾರೆ. ನಂತರ ಬಿಸ್ಸಿ ಕೃಷಿ ಪದವಿಯನ್ನು ಕೃಷಿ ಮಹಾವಿದ್ಯಾಲಯ ಹಾಸನದಲ್ಲಿ ಪೂರ್ಣಗೊಳಿಸಿ, ಸ್ನಾತಕೋತರ ಪದವಿಯನ್ನು ಕೃಷಿ ವಿಶ್ವವಿದ್ಯಾಲಯ ಧಾರವಾಡದಲ್ಲಿ ಪಡೆದು ಕೊಂಡಿರುತ್ತಾರೆ. ಇವರು ತಮ್ಮ ಎಂ.ಎಸ್ಸಿ ವ್ಯಾಸಂಗದಲ್ಲಿ ‘ತೊಗರಿ ಬೇಳೆಯಲ್ಲಿ ಕಾಂಡ ಕೊರಕದ ಸಂಭವ ಹಾಗೂ ನಿರ್ವಹಣೆ ” ಇದರ ಮೇಲೆ ಪ್ರಬಂಧವನ್ನು ಮುಂಡಿಸಿದ್ದರು.

ಜೂ.12ರಂದು ಕೃಷಿ ವಿಶ್ವವಿದ್ಯಾಲಯ ಧಾರವಾಡದಲ್ಲಿ ನಡೆದ 36 ನೇ ಘಟಿಕೋತ್ಸವದಲ್ಲಿ ಇವರಿಗೆ ರಾಜ್ಯಪಾಲರು, ಕುಲಪತಿಗಳು ಹಾಗೂ ಕೃಷಿ ಸಚಿವರಾದ ಚೆಲವರಾಯ ಸ್ವಾಮಿಯವರ ಸಮ್ಮುಖದಲ್ಲಿ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಲಾಯಿತು.

ಪ್ರಸ್ತುತ ಅಖಿಲ ಭಾರತ ಸುಸಂಘಟಿತ ಜೇಣುನೊಣಗಳ ಮತ್ತು ಪರಾಗಸ್ಪರ್ಶಗಳ ಸಂಶೋಧನಾ ಪ್ರಾಯೋಜನೆ, ಜೇನು ಕೃಷಿ ವಿಭಾಗ, ಕೃಷಿ ವಿಶ್ವವಿದ್ಯಾಲಯ, ಜೆಕೆವಿಕೆ ಬೆಂಗಳೂರು ಇಲ್ಲಿ ಹಿರಿಯ ಸಂಶೋಧನಾ ಸಹೋದ್ಯೋಗಿ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ . ಇವರು ಜಾಲ್ಸೂರು ಗ್ರಾಮದ ಸಣ್ಣಮನೆ ಆರ್ತಾಜೆಯಲ್ಲಿ ನೆಲೆಸಿರುವ ನಿವೃತ್ತ ಯೋಧ ತಿರುಮಲೇಶ್ವರ ಸಣ್ಣಮನೆ ಮತ್ತು ನೆಟ್ಟಾರು ಸ.ಹಿ.ಪ್ರಾ.ಶಾಲೆ ಮುಖ್ಯೋಪಾಧ್ಯಾಯಿನಿ ಶ್ರೀಮತಿ ನಳಿನಾಕ್ಷಿ ಎ. ಇವರ ಪುತ್ರಿ. ಸಹೋದರಿ ರಚಿತಾ ಟಿ ಎನ್ ಕೃಷಿ ವಿಶ್ವವಿದ್ಯಾಲಯ ಜಿಕೆವಿಕೆ ಬೆಂಗಳೂರಿನಲ್ಲಿ ಪ್ರಥಮ ವರ್ಷದ ಎಂ.ಎಸ್ಸಿ ಫುಡ್ ಸೈನ್ಸ್ ಅಂಡ್ ನ್ಯೂಟ್ರಿಷನ್ ವ್ಯಾಸಂಗ ಮಾಡುತ್ತಿದ್ದಾರೆ.