2022 – 23 ನೇ ಸಾಲಿನ ಎಸ್ ಎಸ್ ಎಲ್ .ಸಿ ಮುರು ಮರುಮೌಲ್ಯ ಮಾಪನದಲ್ಲಿ ರೋಟರಿ ವಿದ್ಯಾ ಸಂಸ್ಥೆಯ ಐವರು ವಿದ್ಯಾರ್ಥಿನಿಯರು ಹೆಚ್ಚುವರಿ ಅಂಕ ಪಡೆದಿರುತ್ತಾರೆ.
ಸನಿಹಾ ಶೆಟ್ಟಿ 620 ಅಂಕಗಳನ್ನು ರಾಜ್ಯಕ್ಕೆ 6ನೇ ಸ್ಥಾನ ಪಡೆದಿದ್ದಳು. ಇಂಗ್ಲೀಷ್ ನಲ್ಲಿ 123 ಅಂಕ ಪಡೆದಿದ್ದು ಮರುಮೌಲ್ಯ ಮಾಪನದಲ್ಲಿ ಒಂದು ಅಂಕ ಹೆಚ್ಚುವರಿ ಪಡೆದು 124 ಹಾಗೂ ಸಮಾಜ ವಿಜ್ಞಾನದಲ್ಲಿ 98 ಅಂಕ ಪಡೆದಿದ್ದು ಮರುಮೌಲ್ಯ ಮಾಪನದಲ್ಲಿ ಒಂದು ಅಂಕ ಹೆಚ್ಚುವರಿ ಪಡೆದು 99 ಅಂಕ ಗಳಿಸಿ ಒಟ್ಟು 622 ಅಂಕಗಳಿಂದ ರಾಜ್ಯಕ್ಕೆ ನಾಲ್ಕನೇ ಸ್ಥಾನ ಗಳಿಸಿರುತ್ತಾಳೆ.
ವಿದ್ಯಾರ್ಥಿನಿ ಸಾನ್ವಿ ಒಟ್ಟು 531 ಅಂಕ ಪಡೆದಿದ್ದು, ಹಿಂದಿ ಭಾಷೆಯ ಉತ್ತರ ಪತ್ರಿಕೆಯಲ್ಲಿ 66 ಅಂಕ ಪಡೆದಿದ್ದು ಮರುಮೌಲ್ಯ ಮಾಪನದಲ್ಲಿ 20 ಅಂಕ ಹೆಚ್ಚುವರಿ ಗಳಿಸಿ 86 ಪಡೆದು ಒಟ್ಟು 551 ರೊಂದಿಗೆ ಡಿಸ್ಟಿಂಕ್ಷನ್ ಪಡೆದಿರುತ್ತಾಳೆ.
ವಿದ್ಯಾರ್ಥಿನಿ ವೈಷ್ಣವಿ ಶೆಟ್ಟಿ ಗಣಿತ ವಿಷಯದಲ್ಲಿ 84 ಅಂಕ ಪಡೆದಿದ್ದು ಮರುಮೌಲ್ಯ ಮಾಪನದಲ್ಲಿ 5 ಹೆಚ್ಚುವರಿ ಅಂಕ ಹಾಗೂ ಹಿಂದಿ ಭಾಷಾ ಪತ್ರಿಕೆಯಲ್ಲಿ 98 ಅಂಕ ಪಡೆದಿದ್ದು ಮರುಮೌಲ್ಯ ಮಾಪನದಲ್ಲಿ ಒಂದು ಅಂಕ ಹೆಚ್ಚುವರಿ ಗಳಿಸಿ 99 ಆಗಿದೆ. ಒಟ್ಟು 603 ಇದ್ದ ಅಂಕಗಳು 609ಕ್ಕೆ ಏರಿದೆ.
ವಿದ್ಯಾರ್ಥಿನಿ ಹಿತಾ ಶೆಟ್ಟಿ ಒಟ್ಟು 594 ಅಂಕ ಗಳಿಸಿದ್ದು ಮರುಮೌಲ್ಯ ಮರುಮೌಲ್ಯದಲ್ಲಿ ಸಮಾಜ ವಿಜ್ಞಾನದಲ್ಲಿ 5 ಅಂಕ ಹೆಚ್ಚುವರಿ ಪಡೆದು 599 ಅಂಕ ಗಳಿಸಿರುತ್ತಾಳೆ.
ವಿದ್ಯಾರ್ಥಿನಿ ಮನಸ್ವಿ.ಯು.ಬಿ ವಿಜ್ಞಾನ ವಿಷಯದಲ್ಲಿ 92 ಅಂಕ ಪಡೆದಿದ್ದು ಮರುಮೌಲ್ಯ ಮಾಪನದ ನಂತರ ಹೆಚ್ಚುವರಿ ನಾಲ್ಕು ಅಂಕಗಳನ್ನು ಪಡೆದು 96 ಆಗಿದೆ. ಒಟ್ಟು 599 ಅಂಕಗಳು 603 ಕ್ಕೆ ಏರಿದೆ.