ಸ್ಥಳೀಯರ ಸಹಕಾರ : ಆಸ್ಪತ್ರೆಗೆ ದಾಖಲು
ಸುಳ್ಯದ ಶ್ರೀರಾಂಪೇಟೆಯ ಜೂನಿಯರ್ ಕಾಲೇಜ್ ತಿರುವು ರಸ್ತೆಯಲ್ಲಿ ರಸ್ತೆ ದಾಟುತ್ತಿದ್ದ ವೃದ್ದರೋರ್ವರು ಕುಸಿದು ಬಿದ್ದು ಗಾಯಗೊಂಡಿದ್ದು, ಸ್ಥಳಿಯರ ಸಹಕಾರದಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಘಟನೆ ಇಂದು ಮದ್ಯಾಹ್ನ ಸಂಭವಿಸಿದೆ.
ಅಜ್ಜಾವರ ಗ್ರಾಮದ ದಿವಾಕರ ಆಚಾರ್ಯರವರು ಗಾಯಗೊಂಡಿರುವ ವ್ಯಕ್ತಿ. ದಿವಾಕರರವರು ರಸ್ತೆ ದಾಟುವ ಸಮಯ ತಲೆ ತಿರುಗಿ ಬಿದ್ದಿರುವುದಾಗಿ ತಿಳಿದು ಬಂದಿದೆ. ಘಟನೆ ರಸ್ತೆಯ ಮಧ್ಯ ಭಾಗದಲ್ಲಿ ಸಮಭವಿಸಿದ ಕಾರಣ ಕೆಲ ಸಮಯ ವಾಹನ ಸಂಚಾರಕ್ಕೆ ಅಡಚಣೆಯಾಯಿತು.
ಗಾಯಗೊಂಡ ವ್ಯಕ್ತಿಯನ್ನು ಇದೇ ರಸ್ತೆಯಲ್ಲಿ ಬರುತ್ತಿದ್ದ ಸುಳ್ಯ ಲ್ಯಾಪ್ ಶಾಪ್ ಮಾಲಕ ಉವೈಸ್ ಮತ್ತು ಗೃಹರಕ್ಷಕ ದಳದ ಸಿಬ್ಬಂದಿ ಅಬ್ದುಲ್ ಗಫೂರ್ ರವರು ಆಟೋ ರಿಕ್ಷಾದಲ್ಲಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಸಹಕರಿಸಿದರು.