ಎಬಿವಿಪಿ ಮನವಿಗೆ ಸ್ಪಂದನೆ
ಸುಳ್ಯ ಡಿ.ದೇವರಾಜ್ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಡ್ರೈನೇಜ್ (ಸೆಪ್ಟಿಕ್ ಟ್ಯಾಂಕ್ ) ಮೂರು ತಿಂಗಳಿನಿಂದ ಸೋರಿಕೆ ಸಮಸ್ಯೆ ಕಾಡುತ್ತಿದ್ದು ಅದನ್ನು ಶೀಘ್ರವೇ ಸರಿಪಡಿಸುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ನಗರ ವತಿಯಿಂದ ವಿದ್ಯಾರ್ಥಿನಿ ನಿಲಯದ ಮೇಲ್ವಿಚಾರಕರಿಗೆ ಮನವಿ ನೀಡಲಾಯಿತು. ಈ ಮನವಿಯ ಹಿನ್ನಲೆಯಲ್ಲಿ ಸಮಸ್ಯೆಯನ್ನು ಸರಿಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಮಳೆ ಪ್ರಾರಂಭವಾಗಿದ್ದು ಈ ರೀತಿಯ ಸಮಸ್ಯೆಗಳಿಂದ ಸಾಂಕ್ರಾಮಿಕ ರೋಗ ಹರಡುವ ಕಾಯಿಲೆಗಳು ಬರಬಹುದು ಮತ್ತು ಪರಿಸರಕ್ಕೂ ಕೆಟ್ಟ ಪರಿಣಾಮ ಬೀಳಬಹುದಾಗಿರುವುದರಿಂದ ತಕ್ಷಣವೇ ಇದಕ್ಕೆ ಪ್ರತಿಕ್ರಿಯಿಸಿ ಸಮಸ್ಯೆಗೆ ಪರಿಹಾರ ಹುಡುಕಬೇಕು ಒಂದು ವೇಳೆ ಇದು ಸಾದ್ಯಾವಾಗದೇ ಇದ್ದಲ್ಲಿ ಹೋರಾಟಕ್ಕೂ ಸೇರಿದಂತೆ ಸಮಸ್ಯೆ ಬಗೆಹರಿಸಲು ಬೇಕಾದ ಕ್ರಮವನ್ನು ವಹಿಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿಲಾಗಿತ್ತು .
ತಕ್ಷಣಕ್ಕೆ ಪ್ರತಿಕ್ರಿಯಿಸಿದ ವಿದ್ಯಾರ್ಥಿನಿ ನಿಲಯ 3 ದಿನಗಳಲ್ಲಿ ಸೂಕ್ತ ಕ್ರಮ ವಹಿಸಿ ಸಮಸ್ಯೆಯನ್ನು ಸರಿಪಡಿಸಲಾಗಿದೆ .