ಬೆಳ್ಳಾರೆ : ಗ್ರಾಮ ಪಂಚಾಯತ್ ಅಮೃತ ಆರೋಗ್ಯ ಯೋಜನೆಯಡಿ ಆರೋಗ್ಯ ತಪಾಸಣಾ ಶಿಬಿರ

0

ಬೆಳ್ಳಾರೆ ,ಕೊಡಿಯಾಲ, ಹಾಗೂ ಪೆರುವಾಜೆ ಗ್ರಾಮ ಪಂಚಾಯತ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಾರೆ ಸಹಕಾರದೊಂದಿಗೆ ಜಂಟಿಯಾಗಿ ಗ್ರಾಮ ಪಂಚಾಯತ್ ಅಮೃತ ಆರೋಗ್ಯ ಯೋಜನೆಯಡಿ ಮ. ಗಾಂ.ರಾ.ಗ್ರಾಉ.ಖಾ.ಯೋಜನೆಯ ಕಾರ್ಮಿಕರ ಹಾಗೂ ಸಾರ್ವಜನಿಕರ ಆರೋಗ್ಯ ತಪಸಣಾ ಶಿಬಿರ ಬೆಳ್ಳಾರೆ ಎ.ಪಿ.ಎಂ.ಸಿ ಸಂತೆ ಮಾರುಕಟ್ಟೆ ಕಟ್ಟಡದಲ್ಲಿ ನಡೆಯಿತು.

ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ ಪನ್ನೆ, ಉಪಧ್ಯಾಕ್ಷರಾದ ಶ್ರೀಮತಿ ಗೌರಿ, ಸದಸ್ಯರಾದ ಮೋಹಿನಿ, ತಾಲೂಕು ಸಂಯೋಜಕಿ ಶ್ರೀಮತಿ ಗೀತಾ, ಪ್ರಾಥಮಿಕ ಆರೋಗ್ಯ ಕೇಂದ್ರದ ಬೆಳ್ಳಾರೆ ವಿಭಾಗ ಸಿ ಎಚ್ ಓ ಕು. ಹವ್ಯಶ್ರೀ ಬಿ ,ಕೊಡಿಯಾಲ ಸಿ ಎಚ್ ಶ್ರೀಮತಿ ಮಾನಸ, ಪೆರುವಾಜೆ ಸಿ ಎಚ್ ಒ ಕು. ರಚನಾ, ಕಳಂಒ ಸಿ ಎಚ್ ಒ ಶ್ರೀ ಮತಿ ಶಿಲ್ಪಾ, ಆಶಾ ಕಾರ್ಯಕರ್ತೆ ಶ್ರೀಮತಿ ಹರಿಣಿ ,ತಾಲೂಕು ಐಇಸಿ ಸಂಯೋಜಕಿ ಕು. ನಮೀತ, ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರು,ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಗ್ರಾಮ ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.