ಮಂಡೆಕೋಲು ಗ್ರಾಮದ ಮೈತಡ್ಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸುಳ್ಯ ತಾಲೂಕು ಪಂಚಾಯತ್ ನ ಸಹಾಯಕ ನಿರ್ದೇಶಕರು ಆಗಿರುವ ಶ್ರೀಮತಿ ಸರೋಜಿನಿ ಕೇನಾಜೆ ಯವರು ಉಚಿತವಾಗಿ ಸುಮಾರು ಎರಡೂವರೆ ಸಾವಿರ ಮೊತ್ತದ ಟೈ, ಬೆಲ್ಟ್ ಮತ್ತು ಮಕ್ಕಳ ಐಡಿ ಕಾರ್ಡನ್ನು ವಿತರಣೆ ಮಾಡಿ ವಿದ್ಯಾರ್ಥಿ ಗಳಿಗೆ ಶಿಕ್ಷಣದ ಅರಿವು ಮತ್ತು ಮಹತ್ವದ ಬಗ್ಗೆ ಸಂದೇಶ ವನ್ನು ನೀಡಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರು ಹಾಗೂ ಅತಿಥಿ ಶಿಕ್ಷಕಿ ಶ್ರೀಮತಿ ಲೀಲಾವತಿ ಲಕ್ಷಣ್ ಕೇನಾಜೆ ಮತ್ತು ಪಯಸ್ವಿನಿ ಕ್ರೀಡಾ ಮತ್ತು ಕಲಾ ಯುವತಿ ಮಂಡಲದ ಅಧ್ಯಕ್ಷರಾದ ಶ್ರೀಮತಿ ರೂಪಕಲಾ ರೈ ಉಪಸ್ಥಿತರಿದ್ದರು.