ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇದರ ಆಂತರಿಕ ಗುಣಮಟ್ಟ ಖಾತರಿ ಕೋಶದ ಆಶ್ರಯದಲ್ಲಿ ಜೂ. ೨೧ ರಂದು ಕಾಲೇಜಿನ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ರುದ್ರಕುಮಾರ್ ಎಂ.ಎಂ ಅವರು ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಉಷಾ ಕೆ ಪ್ರಶಿಕ್ಷಕಿ ಆರ್ಟ್ ಅಫ್ ಲಿವಿಂಗ್, ಸುಳ್ಯ ಶಾಖೆ ಇವರು ಯೋಗ iತ್ತು ಪ್ರಾಣಾಯಾಮದ ಪ್ರಾಮುಖ್ಯತೆ ಮತ್ತು ವಿವಿಧ ಆಸನಗಳ ಬಗ್ಗೆ ಪ್ರಾತ್ಯಕ್ಷಿಕಾ ತರಬೇತಿಯನ್ನು ನೀಡಿದರು. ಶ್ರೀಮತಿ ರತ್ನಾವತಿ.ಡಿ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶ್ರೀಮತಿ ಮಮತಾ.ಕೆ ಸಂಯೋಜಕಿ ಆಂತರಿಕ ಗುಣiಟ್ಟ ಖಾತರಿ ಕೋಶ ಇವರು ಕಾರ್ಯಕ್ರಮಕ್ಕೆ ಸ್ವಾಗತನುಡಿಗಳನ್ನಾಡಿದರು ಶ್ರೀಮತಿ ಭವ್ಯ.ಪಿ.ಎಮ್ ಇಂಗ್ಲೀಷ್ ವಿಭಾಗ ಮುಖ್ಯಸ್ಥರು ಕಾರ್ಯಕ್ರಮಕ್ಕೆ ವಂದಿಸಿದರು.ಕಾಲೇಜಿನ ಬೋಧಕ, ಬೋಧಕೇತರ ಮತ್ತು ವಿದ್ಯಾರ್ಥಿ ವೃಂದ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡರು.