ನಿರ್ಮಾಣ ಹಂತದಲ್ಲಿರುವ ಮನೆಯಿಂದ ಬಿದ್ದು ಪೈಂಟರ್ ಜಖಂಗೊಂಡ ಘಟನೆ ಸುಳ್ಯ ಸಮೀಪದ ಬೋರುಗುಡ್ಡೆ ಬಳಿ ಜೂನ್ ೨೧ರಂದು ಸಂಜೆ ವರದಿಯಾಗಿದೆ.
ಪೈಂಟರ್ ಆಗಿ ವೃತ್ತಿ ನಿರ್ವಹಿಸುತ್ತಿರುವ ಸುಳ್ಯ ಜಯನಗರದ ಉಸ್ಮಾನ್ ಕೆ ಎಂಬ ಯುವಕ ಪೈಯಿಂಟ್ ಕೆಲಸ ಮಾಡುತ್ತಿದ್ದಾಗ ಮನೆಯೊಂದರ ಮೇಲಿನಿಂದ ಬಿದ್ದು ತೀವ್ರ ಜಖಂಗೊಂಡಿದ್ದಾರೆ.
ನೂತನವಾಗಿ ನಿರ್ಮಿಸಿರುವ ಮನೆಯೊಂದರ ಮೇಲ್ಭಾಗದಿಂದ ಬಣ್ಣ ಬಳಿಯುವ ಸಮಯ ಮೊದಲನೆಯ ಅಂತಸ್ತಿನಲ್ಲಿ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹಲಗೆ ಇಟ್ಟು ಹೋಗುತ್ತಿದ್ದಾಗ ಹಲಗೆ ತುಂಡಾಗಿ ಕೆಳಕ್ಕೆ ಬಿದ್ದಿದ್ದಾರೆ ಎನ್ನಲಾಗಿದ್ದು, ಈ ಸಮಯ ಅವರ ಎಡ ಭುಜ ಮತ್ತು ಕೈ,ಕಾಲಿಗೆ ಪೆಟ್ಟಾಗಿದ್ದು ಕೂಡಲೆ ಅವರನ್ನು ಮಂಗಳೂರು ಆಸ್ಪತ್ರೆಗೆ ಕೊಂಡಯ್ಯಲಾಗಿದೆ. ಇದೀಗ ಅವರು ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.