ಸುಳ್ಯ ಸೈಂಟ್ ಜೋಸೆಫ್ ಶಾಲೆಯಲ್ಲಿ ಶಿಕ್ಷಕ – ಪೋಷಕರ ಸಭೆ

0

ಸುಳ್ಯ ಸೈಂಟ್ ಜೋಸೆಫ್ ಶಾಲೆ ಸುಳ್ಯ ಇಲ್ಲಿ ಕಿರಿಯ ಪ್ರಾಥಮಿಕ ಶಾಲಾ ವಿಭಾಗದ ಪ್ರಥಮ ಶಿಕ್ಷಕ ಪೋಷಕರ ಸಭೆಯನ್ನು ಜೂ.22 ರಂದು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ವಂದನೀಯ ಫಾ! ವಿಕ್ಟರ್ ಡಿಸೋಜರವರು ವಹಿಸಿ, ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.


ಮೊದಲಿಗೆ ವಿದ್ಯಾರ್ಥಿಗಳಿಂದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಶಾಲಾ ಶಿಕ್ಷಕ ಕಾರ್ಯದರ್ಶಿ ಶ್ರೀಮತಿ ಶೋಭಾ ರವರು ಶಾಲಾ ಶೈಕ್ಷಣಿಕ ವರದಿಯನ್ನು ಸಭೆಯ ಮುಂದಿಟ್ಟರು. ನಂತರ ಶಾಲಾ ಮುಖ್ಯೋಪಾಧ್ಯಾಯಿನಿ ಸಿ. ಬಿನೋಮರವರು ಶಾಲಾ ನಿಯಮಾವಳಿಗಳನ್ನು ತಿಳಿಸಿದರು. ನಂತರ ಕಳೆದ ಶೈಕ್ಷಣಿಕ ವರ್ಷದ ಪೋಷಕ ಪ್ರತಿನಿಧಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ನಂತರ ಪೋಷಕರಿಂದ ಶಾಲಾ ಸಂಚಾಲಕರು ಅಹವಾಲುಗಳನ್ನು ಸ್ವೀಕರಿಸಿದರು. ಹಾಗೂ ಪ್ರಸಕ್ತ ಸಾಲಿಗೆ ನೂತನವಾಗಿ ಪೋಷಕ ಪ್ರತಿನಿಧಿಗಳ ಆಯ್ಕೆಯನ್ನು ಮಾಡಿ ಅವರನ್ನು ಸ್ವಾಗತಿಸಲಾಯಿತು.

ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಪೂಜ್ಯ ಸಂಚಾಲಕರು ಮಾತನಾಡಿ ಶೈಕ್ಷಣಿಕ ವರ್ಷದ ಸ್ಥಿತಿಗತಿಯನ್ನು ಹಾಗೂ ಮುಂದಿನ ಯೋಜನೆಗಳನ್ನು ಪೋಷಕರ ಮುಂದಿಟ್ಟರು. ಕಾರ್ಯಕ್ರಮಕ್ಕೆ ಸಹಶಿಕ್ಷಕಿ ಶ್ರೀಮತಿ ಜ್ಯೋತಿರವರು ಸ್ವಾಗತಿಸಿ ಶ್ರೀಮತಿ ಭಾರತಿ ವಂದಿಸಿದರು. ಕಾರ್ಯಕ್ರಮವನ್ನು ಶಿಕ್ಷಕರಾದ ಶ್ರೀ ಭಾನುಪ್ರಕಾಶ್ ಹಾಗೂ ಶ್ರೀಮತಿ ಗೀತಾ ಲಕ್ಷ್ಮಿ ನಿರೂಪಿಸಿದರು. ಎಲ್ಲಾ ಶಿಕ್ಷಕ ಹಾಗೂ ಶಿಕ್ಷಕೇತರ ವರ್ಗದವರು ಸಹಕರಿಸಿದರು.