ಜೂ.24,25 ರಂದು ಫಾತಿಮಾ ಫಾಳಿಲಾ ಮಹಿಳಾ ಶರೀಅತ್ ಕಾಲೇಜಿನ ಪ್ರಥಮ ವಾರ್ಷಿಕ ಸಮ್ಮೇಳನ

0

ಎರಡು ದಿನಗಳ ಧಾರ್ಮಿಕ ಪ್ರಭಾಷಣಕ್ಕೆ ಖ್ಯಾತ ಪ್ರಭಾಷಣಕಾರರ ಆಗಮನ: ಪ್ರಾಂಶುಪಾಲ ನಈಮ್ ಫೈಝಿ

ಕಲ್ಲುಗುಂಡಿ ಮುಹಿಯುದ್ದೀನ್ ಜುಮಾ ಮಸೀದಿ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ
ಫಾತಿಮಾ ಫಾಳಿಲಾ ಮಹಿಳಾ ಶರೀಅತ್ ಕಾಲೇಜಿನ ಪ್ರಥಮ ವಾರ್ಷಿಕ ಸಮ್ಮೇಳನ ಜೂನ್ 24, 25 ರಂದು ಕಲ್ಲುಗುಂಡಿ ಜುಮಾ
ಮಸೀದಿ ವಠಾರದಲ್ಲಿ ನಡೆಯಲಿದೆ.ಈ ಕಾರ್ಯಕ್ರಮದ ಎರಡು ದಿನಗಳ ಧಾರ್ಮಿಕ ಪ್ರಭಾಷಣದಲ್ಲಿ ಖ್ಯಾತ ಪ್ರಭಾಶಣಕಾರರು ಭಾಗವಹಿಸಲಿದ್ದಾರೆ ಎಂದು ಕಲ್ಲುಗುಂಡಿ ಫಾತಿಮಾ ಫಾಳಿಲಾ ಮಹಿಳಾ ಷರೀಅತ್ ಕಾಲೇಜಿನ ಪ್ರಾಂಶುಪಾಲ ಅಹ್ಮದ್ ನಈಮ್ ಫೈಝಿಯವರು ಇಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹೇಳಿದ್ದಾರೆ.

ಈ ವೇಳೆ ಮಾತನಾಡಿರುವ ಅವರು ದೇಶದ ಪ್ರತಿಷ್ಠಿತ ಇಸ್ಲಾಮಿಕ್ ಶೈಕ್ಷಣಿಕ ಸಂಸ್ಥೆಯ
ಫಾಳಿಲಾ ಕೋರ್ಸ ನ್ನು ವಿದ್ಯಾರ್ಥಿನಿಯರಿಗೆ ನಮ್ಮ ಸಂಸ್ಥೆಯಲ್ಲಿ ನೀಡುವುದರ ಜೊತೆಗೆ ಮಾದರಿ ಮಹಿಳೆಯನ್ನು ಸಜ್ಜುಗೊಳಿಸಲು ಪೂರಕವಾದ
ತರಬೇತಿಯನ್ನು ನಮ್ಮ ಸಂಸ್ಥೆಯಲ್ಲಿ ಹೆಣ್ಣು ಮಕ್ಕಳಿಗೆ ನೀಡಲಾಗುತ್ತಿದೆ.

ಈ ವರ್ಷದಿಂದ
ಕಂಪ್ಯೂಟರ್ ಮತ್ತು ಟೈಲರಿಂಗ್ ತರಬೇತಿ ನೀಡಲು ಬೇಕಾದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದ್ದು
ಒಂದೇ ಸೂರಿನಲ್ಲಿ ಧಾರ್ಮಿಕ ಲೌಕಿಕ ಸಮನ್ವಯ ಶಿಕ್ಷಣದ ಜೊತೆಗೆ ಆಧುನಿಕ ಯುಗದಲ್ಲಿ
ಅನಿವಾರ್ಯವಾಗಿ ಮಹಿಳೆಯರಿಗೆ ದೊರಕಬೇಕಾದ ಪ್ರಾಥಮಿಕ ಮತ್ತು ಮೂಲಭೂತ
ಕೌಶಲ್ಯಗಳನ್ನು ಕಲಿಸಲು ಯೋಜನೆಗಳನ್ನು ರೂಪಿಸಿಕೊಂಡಿದೆ.
ಇದೀಗ ನಮ್ಮ ಶೈಕ್ಷಣಿಕ ಸಂಸ್ಥೆಯ ವಾರ್ಷಿಕ ಸಮ್ಮೇಳನದ ಅಂಗವಾಗಿ ಎರಡು ದಿನಗಳ ಧಾರ್ಮಿಕ ಪ್ರಭಾಷಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಜೂ 24 ರಂದು ಖ್ಯಾತ ವಾಗ್ಮಿ ಹಂಝ ಮಿಸ್ಬಾಯಿ ಓಟಪದವು ಭಾಗವಹಿಸಿ ಇಸ್ಲಾಮಿನಲ್ಲಿ ಯುವಕ ಮತ್ತು ಯುವತಿಯರಿಗೆ ಶಿಕ್ಷಣದ ಅನಿವಾರ್ಯತೆಯ ಬಗ್ಗೆ ಪ್ರಭಾಷಣ ಮಾಡಲಿದ್ದಾರೆ.
ಎರಡನೆಯ ದಿನವಾದ ಜೂ 25 ರಂದು ಸಯ್ಯದ್ ಕುಟುಂಬದ ನೇತಾರ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಕುನ್ನುಂಗೈ ಕೇರಳ ಇವರು ಸಾಮೂಹಿಕ ಪ್ರಾರ್ಥನೆ ನೆರವೇರಿಸಲಿದ್ದು,ಮಾಡನ್ನೂರುನೂರುಲ್ ಹುದಾ ಅಕಾಡೆಮಿಯ ಪ್ರಾಂಶುಪಾಲರಾದ ಅಡ್ವಕೇಟ್ ಹನೀಫ್ ಹುದವಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

ಎರಡು ದಿನಗಳ ಕಾರ್ಯಕ್ರಮದಲ್ಲಿ ವಿವಿಧ ಉಲಮಾ ಪಂಡಿತರು, ಸಾಮಾಜಿಕ ಧಾರ್ಮಿಕ ಮುಖಂಡರುಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುವಂತೆ ಅವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ತಾಜ್ ಮಹಮ್ಮದ್,ಪ್ರಧಾನ ಕಾರ್ಯದರ್ಶಿ ಎ ಕೆ ಹಸೈನಾರ್ ಕಲ್ಲುಗುಂಡಿ,ಕೋಶಾಧಿಕಾರಿ ಎ ಕೆ ಇಬ್ರಾಹಿಂ,ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಕಿಫಾಯತುಲ್ಲ,ಪ್ರಧಾನ ಕಾರ್ಯದರ್ಶಿ ಶಮೀರ್ ಕೆಎಂ,ಆಶಿಕ್ ಕೆ ಎಚ್,ಸ್ವಾದಿಕ್ ಎಸ್ ಎ ಉಪಸ್ಥಿತರಿದ್ದರು.