ಅಮರಮುಡ್ನೂರು ಗ್ರಾಮದ ಪೈಲಾರು ಸೆಲ್ವದೊರೈ ಯವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ
ಜೂ.21ರಂದು ನಿಧನರಾದರು.
ಅವರಿಗೆ 52 ವರ್ಷ ವಯಸ್ಸಾಗಿತ್ತು.
ಮೃತರು
ಕಳೆದ ಕೆಲ ಸಮಯಗಳಿಂದ ಅನಾರೋಗ್ಯ ಬಾಧಿತರಾಗಿ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಜೂ.21 ರಂದು ರಾತ್ರಿ ವೇಳೆಯಲ್ಲಿ ಚಿಕಿತ್ಸೆಗೆ ಸ್ಪಂದಿಸಿದೆ ಇದ್ದುದರಿಂದ ಆಸ್ಪತ್ರೆಯಲ್ಲಿ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.
ಮೃತರು ಪತ್ನಿ ಶ್ರೀಮತಿ ಪ್ರೇಮಲತಾ , ಮೂವರು ಪುತ್ರಿಯರಾದ ಕು.ಅಸ್ತವಿಕಾ, ಕು.ಕೃತಿಕಾ, ಕು.ಹರಿಣಿ, ಸಹೋದರಿ ಶ್ರೀಮತಿ ತಾಮರೆ ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರು ಕೆ.ಎಫ್.ಡಿ.ಸಿ ಗೋಂಟಡ್ಕ ವ್ಯಾಪ್ತಿಯಲ್ಲಿ ಸೂಪರ್ ವೈಸರ್ ವೃತ್ತಿ
ನಿರ್ವಹಿಸುತ್ತಿದ್ದರು.