ನವೋದಯ ಪ್ರವೇಶ ಪರೀಕ್ಷೆ ಯ ಫಲಿತಾಂಶ ಪ್ರಕಟ:ಬೆಳ್ಳಾರೆ ಜ್ಞಾನದೀಪ ನವೋದಯ ತರಬೇತಿ ಸಂಸ್ಥೆಯ 13ವಿದ್ಯಾರ್ಥಿಗಳು ಆಯ್ಕೆ

0

ಕಳೆದ ಎಪ್ರಿಲ್ ನಲ್ಲಿ ನಡೆದ ನವೋದಯ 6ನೇ ತರಗತಿ ಪ್ರವೇಶ ಪರೀಕ್ಷೆ ಯ ಫಲಿತಾಂಶ ಪ್ರಕಟಗೊಂಡಿದ್ದು ಬೆಳ್ಳಾರೆ ಮತ್ತು ಸುಳ್ಯದ ಜ್ಞಾನದೀಪ ನವೋದಯ ತರಬೇತಿ ಸಂಸ್ಥೆ ಯಿಂದ ತರಬೇತಿ ಪಡೆದ 13ವಿದ್ಯಾರ್ಥಿಗಳು ಜವಾಹರ್ ನವೋದಯ ವಿದ್ಯಾಲಯ ಕ್ಕೆ ಆಯ್ಕೆಯಾಗಿದ್ದಾರೆ .

ಈಶ್ವರಮಂಗ ಲ ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಪುತ್ತೂರು ತಾಲೂಕು ನೆಟ್ಟಣಿಗೆ ಮುಡ್ನೂರು ಗ್ರಾಮದ ಮುಂಡ್ಯ ದೀಪಕ್ ಕುಮಾರ್ ಪಿ.ಕೆ ಮತ್ತು ಹವ್ಯ ಬಿ.ಎ ದಂಪತಿಯ ಪುತ್ರಿ ಚರಿಷ್ಮಾ ಎಂ.ಡಿ ,ಕೂತ್ಕುಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ,ಸುಳ್ಯ ತಾಲೂಕು ಕೂತ್ಕುಂಜ ಗ್ರಾಮದ ಅರ್ನೋಜಿ ಎ.ಕೆ ಚೆನ್ನಕೇಶವ ಮತ್ತು ರೋಹಿಣಿ ದಂಪತಿಯ ಪುತ್ರ ಎ.ಕೆ ಮೇಘನ್ ,ಪುತ್ತೂರು ತಾಲೂಕು ಬೊಳಿಕ್ಕಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ,ಪುತ್ತೂರು ತಾಲೂಕು ಮಾಡಾವು ಕಟ್ಟೆ ಕೇಶವ ಭಟ್ ಮತ್ತು ನಿರ್ಮಲ ಪಿ ದಂಪತಿಯ ಪುತ್ರಿ ಚಿನ್ಮಯಿ ಸರಸ್ವತಿ ,ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿ ಸುಳ್ಯ ಬೆಟ್ಟಂಪಾಡಿ ಭಾನುಪ್ರಕಾಶ್ ಬಿ.ಎನ್ ಮತ್ತು ಸುಪ್ರಿಯಾ ಎನ್ .ಎನ್ ದಂಪತಿಯ ಪುತ್ರ ದಿಗಂತ್ ಬಿ.ಬಿ ,ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿ ,ಕಳಂಜ ಗ್ರಾಮದ ತಂಟೆಪ್ಪಾಡಿ ಜಯಪ್ರಸಾದ್ ಟಿ ಮತ್ತು ವಿನುತಾ ಕೆ. ಜೆ ದಂಪತಿಯ ಪುತ್ರ ಗೌರವ್ ಟಿ ,ಮಾಲೆತ್ತೋಡಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ,ಕೊಳ್ತಿಗೆ ಗ್ರಾಮದ ಕಲಾಯಿ ನವೀನ ಗೌಡ ಮತ್ತು ಗೀತಾ ದಂಪತಿಯ ಪುತ್ರ ಪೂರ್ಣೇಶ್ ,ಪಾಂಡಿಗದ್ದೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ,ಐವತ್ತೊಕ್ಲು ಗ್ರಾಮದ ಕೆಮ್ಮೂರು ಅರುಣ್ ಕುಮಾರ್ ಸಿ.ಡಿ ಮತ್ತು ಜಯಲಕ್ಷ್ಮಿ ಡಿ ದಂಪತಿಯ ಪುತ್ರಿ ಪ್ರಣವಿ ಕುಂಬಾರ್ ,ಈಶ್ವರಮಂಗಲ ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕನಕಮಜಲು ಗ್ರಾಮದ ಕುತ್ಯಾಳ ಗೋಪಾಲಕೃಷ್ಣ ಕೆ ಮತ್ತು ಭಾರತಿ ಎಂ .ಪಿ ದಂಪತಿಯ ಪುತ್ರಿ ಪ್ರಾಪ್ತಿ ಕೆ.ಜಿ ,ಗೂನಡ್ಕ ಮಾರುತಿ ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿ ,ಅರಂತೋಡು ಗ್ರಾಮದ ಪಿಂಗಾರತೋಟ ಯಶೋಧರ ಪಿ.ಡಿ ಮತ್ತು ವೀಣಾ ವೈ‌.ಟಿ ದಂಪತಿಯ ಪುತ್ರ ಪ್ರತ್ಯುಷ್ ವೈ.ಪಿ ,ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ‌ನ ವಿದ್ಯಾರ್ಥಿನಿ ಅರಿಯಡ್ಕ ಗ್ರಾಮದ ಬಪ್ಪಪುಂಡೇಲು ಬಾಲಕೃಷ್ಣ ನಾಯ್ಕ ಬಿ ಮತ್ತು ಸುಜಾತ ಬಿ ದಂಪತಿಯ ಪುತ್ರಿ ಶಮಿಕ ಬಿ.ಎಸ್ ,ಈಶ್ವರ ಮಂಗಲ ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ,ದೇವಚಳ್ಳ ಮುಂಡೋಡಿ ದಿ.ಅವಿನಾಶ್ ಮತ್ತು ಕಾವ್ಯ ದಂಪತಿಯ ಪುತ್ರ ವಿಹಾನ್ ಎಂ.ಎ ,ದಾಸರಬೈಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ,ಮರ್ಕಂಜ ಗ್ರಾಮದ ಹೊಸವೊಳಿಕೆ ಪ್ರೇಮಕುಮಾರ್ ಎಚ್ ಮತ್ತು ಕವಿತಾ ಎಚ್ ದಂಪತಿಯ ಪುತ್ರಿ ಯಶ್ಮಿತಾ ಎಚ್ ,ದೋಳ್ಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿದೋಳ್ಪಾಡಿ ಗ್ರಾಮದ ಕೂರೇಲು ದಯಾನಂದ ಗೌಡ ಮತ್ತು ಪ್ರತಿಭಾ ಎ.ಪಿ ದಂಪತಿಯ ಪುತ್ರ ಲಿಖಿತ್ ಕೆ,ನವೋದಯ ಶಾಲೆಗೆ ಪ್ರಥಮ ಸುತ್ತಿನಲ್ಲಿ ಆಯ್ಕೆಯಾಗಿದ್ದಾರೆ ‌.ಜವಾಹರ್ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾದವರು ಆರರಿಂದ ಹನ್ನೆರಡನೇ ತರಗತಿಯ ವರೆಗೆ ಕೇಂದ್ರೀಯ ಪಠ್ಯ ಕ್ರಮದಲ್ಲಿ ವಸತಿಯುತ ಉಚಿತ ಶಿಕ್ಷಣವನ್ನು ಪಡೆಯಲು ಅರ್ಹರಾಗಿರುತ್ತಾರೆ.

ಸಂಸ್ಥೆ ಯಿಂದ 160ವಿದ್ಯಾರ್ಥಿಗಳು ಆಯ್ಕೆ ಜ್ಞಾನದೀಪ ಸಂಸ್ಥೆಯು ಕಳೆದ 14ವರುಷಗಳಿಂದ ನವೋದಯ ಪ್ರವೇಶ ಪರೀಕ್ಷೆ ಗೆ ತರಗತಿಗಳನ್ನು ನಡೆಸುತ್ತಿದ್ದು ಪ್ರಸ್ತಕ್ತ ವರ್ಷ ಒಟ್ಟು 13ವಿದ್ಯಾರ್ಥಿಗಳು ನವೋದಯ ಶಾಲೆಗೆ ಆಯ್ಕೆಯಾಗುವ ಮೂಲಕ ಇದುವರೆಗೆ ಇಲ್ಲಿ ತರಬೇತು ಪಡೆದ 160ವಿದ್ಯಾರ್ಥಿಗಳು ನವೋದಯ ಶಾಲೆಗೆ ಆಯ್ಕೆಯಾಗಿದ್ದಾರೆ .