ಅರಂಬೂರು : ಇಡ್ಯಡ್ಕ ಶಾಲೆಯಲ್ಲಿ ಯೋಗ ದಿನಾಚರಣೆ

0

ಇಡ್ಯಡ್ಕ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಶಾಲಾ ಮುಖ್ಯಮಂತ್ರಿ ಸಂಪತ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿದ್ಯಾರ್ಥಿನಿಯರಿಂದ ಯೋಗ ನೃತ್ಯ ಕಾರ್ಯಕ್ರಮ, ಸೂರ್ಯನಮಸ್ಕಾರ ಹಾಗೂ ಇತರೆ ಆಸನಗಳನ್ನು ಅಭ್ಯಾಸಿಸಲಾಯಿತು.

ಶಿಕ್ಷಕಿ ರೇಖಾ ಶೇಟ್ ಕಾರ್ಯಕ್ರಮ ನಿರ್ವಹಿಸಿದರು. ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ, ಸಹಶಿಕ್ಷಕಿಯರಾದ ಮಾನಸ, ಮಲ್ಲಿಕಾ ಉಪಸ್ಥಿತರಿದ್ದು ಸಹಕರಿಸಿದರು.