ವಿನೋಬನಗರ ವಿವೇಕಾನಂದ ವಿದ್ಯಾಸಂಸ್ಥೆಗಳು : ಪೋಷಕರ ಮಹಾ ಸಭೆ

0


ಜಾಲ್ಸೂರು ಗ್ರಾಮದ ವಿನೋಬನಗರ ವಿವೇಕಾನಂದ ವಿದ್ಯಾಸಂಸ್ಥೆಗಳ ಪೋಷಕರ ಸಭೆ ಜೂ.24ರಂದು ಶಾಲಾ ವಟಾರದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಸುಧಾಕರ ಕಾಮತ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಅಗಮಿಸಿದ್ದ ವಿದ್ಯಾಭಾರತಿ ದ.ಕ. ಜಿಲ್ಲಾ ಕಾರ್ಯದರ್ಶಿ ಹಾಗೂ ಮಂಗಳೂರಿನ ಶಕ್ತಿ ವಿದ್ಯಾಸಂಸ್ಥೆಯ ಗೌರವ ಸಲಹೆಗಾರ ರಮೇಶ್ ರವರು ದೀಪಪ್ರಜ್ವಲನ ನೆರವೇರಿಸಿ ಶುಭ ಹಾರೈಸಿದರು.


ಸಂಸ್ಥೆಯ ಗೌರವ ಸಲಹೆಗಾರರಾದ ನ. ಸೀತಾರಾಮ, ಆಡಳಿತಾಧಿಕಾರಿ ಗೋಪಾಲ ರಾವ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಜಯಪ್ರಸಾದ್ ಕಾರಿಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.