ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹಿರಿಯ ನಾಗರಿಕರಿಗೆ ಶೀಘ್ರ ದೇವರ ದರ್ಶನ ಭಾಗ್ಯ ಆರಂಭ

0

ಶೀಘ್ರವಾಗಿ ಪಡೆಯಲು ಪತ್ಯೇಕ ವ್ಯವಸ್ಥೆ

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹಿರಿಯ ನಾಗರಿಕರಿಗೆ ದೇವರ ದರ್ಶನ ಶೀಘ್ರವಾಗಿ ಪಡೆಯಲು ಪತ್ಯೇಕ ವ್ಯವಸ್ಥೆ ಜೂ.22 ರಿಂದ ಆರಂಭವಾಗಿದೆ.

ಕರ್ನಾಟಕ ರಾಜ್ಯ ಸರ್ಕಾರ ಈ ಬಗ್ಗೆ ಆದೇಶ ಮಾಡಿದೆ. ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿದ 65 ವರ್ಷ ಮೇಲ್ಪಟ್ಟ ಭಕ್ತಾದಿಗಳು ಆಡಳಿತ ಕಛೇರಿ ಬಳಿ ಇರುವ ಹೆಲ್ಪ್ ಡೆಸ್ಕ್ ಗೆ ಬಂದು ಹಿರಿಯ ನಾಗರಿಕ ಅನ್ನುವ ಬಗ್ಗೆ ವರ್ಷದ ಖಾತ್ರಿಗೆ ಯಾವುದಾದರು ಒಂದು ದಾಖಲೆ ನೀಡಿ ಟೋಕನ್ ಪಡೆಯಬೇಕು. ಬಳಿಕ ದೇವಸ್ಥಾನದ ಎದುರು ಭಾಗ ಬಂದು ದೇವಸ್ಥಾನದ ಒಳಾಂಗಣ ಪ್ರವೇಶಕ್ಕೆ ಹಿರಿಯ ನಾಗರಿಕರಿಗಾಗಿ ಪತ್ಯೇಕ ದಾರಿಯ ವ್ಯವಸ್ಥೆ ಮಾಡಲಾಗಿದೆ.



ಅಲ್ಲಿ ದೇವಸ್ಥಾನದ ಭದ್ರತಾ ಸಿಬ್ಬಂದಿಗಳಿದ್ದು ಅವರಿಗೆ ಟೋಕನ್ ತೋರಿಸಬೇಕು. ಅವರು ದೇವರ ದರ್ಶನಕ್ಕೆ ನೇರವಾಗಿ ಒಳಾಂಗಣ ಪ್ರವೇಶಕ್ಕೆ ಅವಕಾಶ ಮಾಡಿಕೊಡುತ್ತಾರೆ. ಒಂದು ಬದಿಯಿಂದ ಸಾರ್ವಜನಿಕ ಭಕ್ತರು ಬರುತಿದ್ದರೆ, ಇನ್ನೊಂದು ಕಡೆಯಿಂದ ವಿವಿಐಪಿ ಪಾಸ್ ಪಡೆದವರು ಅಥವಾ ಹಣ ಪಾವತಿಸಿ ದೇವರ ದರ್ಶನಕ್ಕೆ ರಶೀದಿ ಪಡೆದವರು ಕ್ಯೂ ನಲ್ಲಿರುತ್ತಾರೆ. ಕಾದು ಕಾದು ಸುಸ್ತಾಗುತಿದ್ದ ಹಿರಿಯ ನಾಗರಿಕರಿಗೆ ವಿಶೇಷವಾಗಿ ಶೀಘ್ರ ದೇವರ ದರ್ಶನಕ್ಕೆ ಅವಕಾಶ ಕೊಟ್ಟಿರುವುದು ಹಿರಿಯ ನಾಗರಿಕರಿಗೆ ಹರ್ಷ ಉಂಟಾಗಿದೆ.