ಶ್ರೀಮತಿ ರಾಧಾಮ್ಮ ಆರ್ ರೈ ಅರಂಬೂರು ನಿಧನ

0

ಆಲೆಟ್ಟಿ ಗ್ರಾಮದ ಅರಂಬೂರು ದಿ.ರಾಮಣ್ಣ ರೈಯವರ ಪತ್ನಿ ಶ್ರೀಮತಿ ರಾಧಾಮ್ಮ ಆರ್ ರೈಯವರು ಅಲ್ಪ ಕಾಲದ ಅಸೌಖ್ಯದಿಂದ ಜೂ.27 ರಂದು ಸಂಜೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರುಗಳಾದ ಕುಕ್ಕಪ್ಪ ರೈ, ಸುಳ್ಯ ಲ್ಯಾಂಪ್ ಸೊಸೈಟಿ ನಿವೃತ್ತ ಕಾರ್ಯದರ್ಶಿ ಜತ್ತಪ್ಪ ರೈ, ಸುಳ್ಯ ಸಬ್ ರಿಜಿಸ್ಟ್ರಾರ್ ಕಚೇರಿ ಉದ್ಯೋಗಿ ಪ್ರಭಾಕರ ರೈ, ಉಪನ್ಯಾಸಕ ವಿಶ್ವನಾಥ ರೈ, ಪುತ್ರಿಯರಾದ ಯಮುನಾ ಎಸ್ ರೈ, ತಾರಾ ಆರ್ ರೈ, ಶಕುಂತಳಾ ರೈ ಹಾಗೂ ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಕುಟುಂಬಸ್ಥರನ್ನು ಅಗಲಿದ್ದಾರೆ.