ಆಲೆಟ್ಟಿ ಪಂಚಾಯತ್ ಸಾಮಾನ್ಯ ಸಭೆ

0


ಆಲೆಟ್ಟಿ ಪಂಚಾಯತ್ ಸಾಮಾನ್ಯ ಸಭೆಯು ಜೂ.28 ರಂದು ಪಂಚಾಯತ್ ಸಭಾಭವನದಲ್ಲಿ ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ವೇದಿಕೆಯಲ್ಲಿ ಉಪಾಧ್ಯಕ್ಷ ದಿನೇಶ್ ಕಣಕ್ಕೂರು, ಪಿ.ಡಿ.ಒ ಕೀರ್ತಿ ಪ್ರಸಾದ್, ಕಾರ್ಯದರ್ಶಿ ಸೃಜನ್ ಉಪಸ್ಥಿತರಿದ್ದರು.
ಅರಂಬೂರು ಗೋಮಾಳಕ್ಕೆ ಕಾದಿರಿಸಿದ ಜಾಗವನ್ನು ಗಡಿ ಗುರುತು ಮಾಡಿ ಆವರಣ ನಿರ್ಮಿಸಿ ಕಾದಿರಿಸುವ ಬಗ್ಗೆ ತೀರ್ಮಾನಿಸಲಾಯಿತು. ಪಯಸ್ವಿನಿ ನದಿಯಲ್ಲಿ ಮರಳು ಬ್ಲಾಕ್ ಗುರುತಿಸುವ ಕುರಿತು ಗಣಿ ಇಲಾಖೆಯ ವತಿಯಿಂದ ಜಂಟಿ ಪರಿಶೀಲನೆ ನಡೆಸಲಾಗಿದೆ.


ಮಳೆಗಾಲದಲ್ಲಿ ವೆಂಟೆಡ್ ಡ್ಯಾಂ ನಿಂದ ಅನಾಹುತ ಸಂಭವಿಸಬಾರದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.
ಕುದ್ಕುಳಿ ರಸ್ತೆ ಕಾಂಕ್ರೀಟ್ ಕಾಮಗಾರಿಗೆ ಆಕ್ಷೇಪಣೆ ದೂರು ಅರ್ಜಿ ಬಂದಿರುವ ಕುರಿತು ಚರ್ಚಿಸಲಾಯಿತು.


ಬಿ.ಎಸ್.ಎನ್.ಎಲ್
ಟವರ್ ನಿರ್ಮಾಣಕ್ಕೆ ಕೂರ್ನಡ್ಕ ಕಾಪುಮಲೆ, ಬಡ್ಡಡ್ಕ ದಲ್ಲಿ ಸ್ಥಳ ಗುರುತಿಸಲಾಗಿದೆ. ಅರಂಬೂರು ಮತ್ತು ಏಣಾವರ ಭೂತಕಲ್ಲು ಭಾಗದಲ್ಲಿ ಟವರ್ ನಿರ್ಮಿಸುವಂತೆ ಬೇಡಿಕೆ ಇರಿಸಲಾಯಿತು.
ಆಲೆಟ್ಟಿ ಮುಖ್ಯ ರಸ್ತೆಯ ತಿರುವಿನಲ್ಲಿ ಇರುವ ಅಪಾಯಕಾರಿ ಮರ ತೆರವುಗೊಳಿಸುವ ಬಗ್ಗೆ ‌ಪ್ರಸ್ತಾಪಿಸಲಾಯಿತು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಅನುಮತಿ ಇಲ್ಲದ ಜಾಹೀರಾತು ಫಲಕಗಳನ್ನು ತಕ್ಷಣತೆರವುಗೊಳಿಸಬೇಕು.ಪಂ. ನಿಂದ ಅನುಮತಿ ಪಡೆದ ಬಳಿಕವೇ ಫಲಕ ಅಳವಡಿಸಬೇಕು.
ಘನತ್ಯಾಜ್ಯ ಘಟಕದ ಅಭಿವೃದ್ಧಿ ಕಾರ್ಯಕ್ಕೆ ಸರಕಾರಕ್ಕೆ ಪತ್ರ ಬರೆಯಬೇಕು.


ವಾರ್ಷಿಕ ತೆರಿಗೆ ಪರಿಷ್ಕರಣೆ ಮಾಡಬೇಕು. ಕಮರ್ಷಿಯಲ್ ಕಟ್ಟಡಗಳಿಗೆ ಸರಕಾರದ ಮಾನದಂಡದಂತೆ ತೆರಿಗೆ ನಿಗದಿಪಡಿಸಬೇಕು.
ನಾಗಪಟ್ಟಣ ಕೆ.ಎಫ್.ಡಿ.ಸಿ ಯಿಂದ ಅವೈಜ್ಞಾನಿಕವಾಗಿ ಕಲುಷಿತ ನೀರನ್ನು ಬಿಡುತ್ತಿದ್ದಾರೆ. ಈ ಬಗ್ಗೆ ಆರೋಗ್ಯ ಸಚಿವರಿಗೆ ಪತ್ರ ಬರೆದು ಕಳುಹಿಸುವಂತೆ ಸದಸ್ಯರು ಒತ್ತಾಯಿಸಿದರು.
ಗ್ರಾಮದ ಜೆ.ಜೆ.ಎಂ ಪೈಪ್ ಲೈನ್ ಅವ್ಯವಸ್ಥೆ ಬಗ್ಗೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ ಗುತ್ತಿಗೆದಾರ ಪ್ರವೀಣ್ ರವರ ಅಸರ್ಪಕ ಕೆಲಸದ ಕುರಿತು ತರಾಟೆಗೆ ತೆಗೆದುಕೊಂಡರು.
ಈ ಬಗ್ಗೆ ಸಂಬಂಧಿಸಿದ ಮೇಲಾಧಿಕಾರಿಯವರಿಗೆ ಪತ್ರ ಬರೆಯುವಂತೆ ನಿರ್ಣಯಿಸಲಾಯಿತು.


ಸದಸ್ಯರಾದ ಸತ್ಯಕುಮಾರ್ ಆಡಿಂಜ, ಚಂದ್ರಕಾಂತ ನಾರ್ಕೋಡು, ಸತ್ಯಪ್ರಸಾದ್ ಗಬ್ಬಲ್ಕಜೆ, ಸುದೇಶ್ ಅರಂಬೂರು, ರತೀಶನ್ ಅರಂಬೂರು, ಧರ್ಮಪಾಲ ಕೊಯಿಂಗಾಜೆ, ಗೀತಾ ಕೋಲ್ಚಾರು, ವೀಣಾ ವಸಂತ ಆಲೆಟ್ಟಿ, ಶಶಿಕಲಾ ದೋಣಿಮೂಲೆ, ಭಾಗೀರಥಿ ಪತ್ತುಕುಂಜ, ವೇದಾವತಿ ನೆಡ್ಚಿಲು, ಕಮಲ ನಾಗಪಟ್ಟಣ, ಅನಿತ ಅರಂಬೂರು, ಶಂಕರಿ ಕೊಲ್ಲರಮೂಲೆ, ಮೀನಾಕ್ಷಿ ಕುಡೆಕಲ್ಲು, ಕುಸುಮಾವತಿ ಬಿಲ್ಲರಮಜಲು ಉಪಸ್ಥಿತರಿದ್ದರು. ಪಿ.ಡಿ.ಒ ಸ್ವಾಗತಿಸಿ, ವಂದಿಸಿದರು. ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.