ಸಿಟಿ ಫ್ರೆಂಡ್ಸ್ ವತಿಯಿಂದ ಸರಕಾರಿ ಪ್ರಾಥಮಿಕ ಶಾಲೆಗಳಿಗೆ ಉಚಿತ ಕೊಡೆ ವಿತರಣೆ

0


ಸಿಟಿ ಫ್ರೆಂಡ್ಸ್ ಕ್ರೀಡಾ ಮತ್ತು ಕಲಾ ಸಂಘ ಜಟ್ಟಿಪಳ್ಳ ಇದರ ವತಿಯಿಂದ ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವ ‌ಮಕ್ಕಳಿಗೆ ಉಚಿತ ಕೊಡೆ ವಿತರಣೆ ಕಾರ್ಯಕ್ರಮ ಜಟ್ಟಿಪಳ್ಳ ಅಂಗನವಾಡಿ ಕೇಂದ್ರ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜಟ್ಟಿಪಳ್ಳ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಡಿಯಾಲಬೈಲ್ ನಲ್ಲಿ ನಡೆಯಿತು.


ಕೊಡೆ ವಿತರಣೆ ಕಾರ್ಯಕ್ರಮದ ಉದ್ಘಾಟನೆ ಕಾರ್ಯಕ್ರಮ ಜಟ್ಟಿಪಳ್ಳ ಶಾಲೆ ಆವರಣದಲ್ಲಿ ‌ನಡೆಯಿತು.


ಪ್ರಖ್ಯಾತ ದೈವ ನರ್ತಕ ಸಿಟಿ ಫ್ರೆಂಡ್ಸ್ ಇದರ ಗೌರವಧ್ಯಕ್ಷ ಜಯರಾಮ ಬೊಳಿಯ ಉಚಿತ ಕೊಡೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಿಟಿ ಫ್ರೆಂಡ್ಸ್ ಅಧ್ಯಕ್ಷ ಅಬ್ದುಲ್‌ ರಹಿಮಾನ್‌ (ಪಿ.ಕೆ) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ಪತ್ರಕರ್ತ ಶರೀಫ್ ಸುದ್ದಿ, ಸಾಮಾಜಿಕ ಕಾರ್ಯಕರ್ತ ರಶೀದ್ ಜಟ್ಟಿಪಳ್ಳ,ಸಿಟಿ ಫ್ರೆಂಡ್ಸ್ ಪದಾಧಿಕಾರಿಗಳಾದ ಎನ್ ಎ ಪವಾಜ್,ಶಿಹಾಬ್ ಜೆ,ವಸಂತ ಜಟ್ಟಿಪಳ್ಳ, ರಂಶಾದ್ ,ಮುಝಮಿಲ್,ಶಾಲಾ ಶಿಕ್ಷಕಿಯರಾದ ಸ್ನೇಹಲತಾ,ಕೇಸರಿ,ಸಿಟಿ ಫ್ರೆಂಡ್ಸ್ ಸದಸ್ಯರಾದ ಬದ್ರುದ್ದೀನ್,ನೌಶದ್ ಎಂ ಎಸ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕ ಸಿಟಿ ಫ್ರೆಂಡ್ಸ್ ‌ನಿರ್ದೇ‌ಶಕ ಅಬ್ದುಲ್‌ ಖಾದರ್ ಏಕೆಜೆ ಸ್ವಾಗತಿಸಿ, ಸಿಟಿ ಫ್ರೆಂಡ್ಸ್ ಕೋಶಾಧಿಕಾರಿ ಮೊಯಿದ್ದೀನ್ ಸಮ್ಮಾಸ್,ಸಿರಾಜ್ ಎಸ್ ಐ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.