ಕೋಲ್ಚಾರು ಸರಕಾರಿ ಶಾಲೆಯ ನಿವೃತ್ತ ಶಿಕ್ಷಕಿ ನಾಗವೇಣಿ ಕೊಯಿಂಗಾಜೆ ಯವರಿಗೆ ಬೀಳ್ಕೊಡುಗೆ ಸಮಾರಂಭ

0

ಶಾಸಕರಿಂದ ಶಾಲಾ ಗ್ರಂಥಾಲಯ ಮತ್ತು ಸ್ಮಾರ್ಟ್ ಕ್ಲಾಸ್ ಉದ್ಘಾಟನೆ

ಆಲೆಟ್ಟಿ ಗ್ರಾಮದ ಕೋಲ್ಚಾರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ನಾಗವೇಣಿ ಕೊಯಿಂಗಾಜೆ ಯವರು ಸುದೀರ್ಘ 29 ವರ್ಷಗಳ ಕಾಲ ವೃತ್ತಿ ಸೇವೆಯಿಂದ ನಿವೃತ್ತಿ ಹೊಂದಿದ್ದು
ಜೂ.30 ರಂದು ಬೀಳ್ಕೊಡುಗೆ ಸಮಾರಂಭವು ಶಾಲೆಯ ಸಭಾಂಗಣದಲ್ಲಿ ಅದ್ದೂರಿಯಾಗಿ ಜರುಗಿತು.

ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಸುದರ್ಶನ ಪಾತಿಕಲ್ಲು ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಮುಖ್ಯ ಅಭ್ಯಾಗತರಾಗಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ, ಆಲೆಟ್ಟಿ ಪಂಚಾಯತ್ ಉಪಾಧ್ಯಕ್ಷ ದಿನೇಶ್ ಕಣಕ್ಕೂರು, ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕರುಣಾಕರ ಹಾಸ್ಪಾರೆ, ಸಂಪಾಜೆ ಪ್ರಾಥಮಿಕ ಸಹಕಾರ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ, ತಾ.ಪಂ.ಮಾಜಿ ಉಪಾಧ್ಯಕ್ಷೆ ಶ್ರೀಮತಿ ಪುಷ್ಪಾ ಮೇದಪ್ಪ ಉಳುವಾರು, ಆಲೆಟ್ಟಿ ಪಂಚಾಯತ್ ಸದಸ್ಯ ರಾದ ಧರ್ಮಪಾಲ ಕೊಯಿಂಗಾಜೆ, ಶ್ರೀಮತಿ ಗೀತಾ ಕೋಲ್ಚಾರು, ಶ್ರೀಮತಿ ಶಂಕರಿ ಕೊಲ್ಲರಮೂಲೆ,
ಶಿಕ್ಷಣ ಸಂಪನ್ಮೂಲ ಕೇಂದ್ರದ ಶ್ರೀಮತಿ ವೀಣಾಸತೀಶ್ ಕೊಯಿಂಗಾಜೆ, ನಿವೃತ್ತ ಯೋಧ ವೀರಪ್ಪ ಗೌಡ ಕೊಯಿಲ,
ಶ್ರೀಧರ ಕೊಯಿಂಗಾಜೆ, ಶ್ರೀಮತಿ ಹೇಮಾವತಿ ಕೊಯಿಂಗಾಜೆ, ಮುಖ್ಯ ಶಿಕ್ಷಕ ಚಿನ್ನಸ್ವಾಮಿ ಶೆಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಾಲೆಗೆ ನೂತನವಾಗಿ ನಿರ್ಮಿಸಿದ ಮಂಜೂಷಾ ಗ್ರಂಥಾಲಯ ಮತ್ತು ಸ್ಮಾರ್ಟ್ ಕ್ಲಾಸ್ ನ್ನು ಶಾಸಕರು ಉದ್ಘಾಟಿಸಿದರು.

ನಿವೃತ್ತಿ ಹೊಂದಿದ ಶಿಕ್ಷಕಿ ಶ್ರೀಮತಿ ನಾಗವೇಣಿ ಮತ್ತು ಶ್ರೀಧರ ಕೊಯಿಂಗಾಜೆ ದಂಪತಿಯನ್ನು ಶಾಲೆಯ ಶಿಕ್ಷಕರು ಸಂಪ್ರದಾಯ ಪ್ರಕಾರ ಹಣೆಗೆ ಕುಂಕುಮ ತಿಲಕವಿರಿಸಿ ಕೈಗಳಿಗೆ ಬಳೆ ತೊಡಿಸಿ ಶಾಲು ಹಾರ ಪೇಟ ತೊಡಿಸಿ ಫಲಪುಷ್ಪ ಸ್ಮರಣಿಕೆ ಸನ್ಮಾನ ಪತ್ರವನ್ನು ನೀಡಿ ಗೌರವಿಸಿ ಬೀಳ್ಕೊಡಲಾಯಿತು.


ಈ ಸಂದರ್ಭದಲ್ಲಿ ಪ್ರಥಮ ಬಾರಿಗೆ ಕೋಲ್ಚಾರು ಪ್ರದೇಶಕ್ಕೆ ಆಗಮಿಸಿದ ಶಾಸಕಿ ಕು. ಭಾಗೀರಥಿ ಮುರುಳ್ಯ ರವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.

ನಾದುರಸ್ತಿಯಲ್ಲಿರುವ
ಶಾಲೆಯ ಮೈದಾನದ ಎದುರಿನ ಕಟ್ಟಡವನ್ನು ತೆರವುಗೊಳಿಸಿ ನೂತನ ಕೊಠಡಿ ನಿರ್ಮಿಸಲು ಅನುದಾನ ಒದಗಿಸಿಕೊಡುವಂತೆ ಶಾಸಕರಿಗೆ ಎಸ್.ಡಿ.ಎಂ.ಸಿ ಅಧ್ಯಕ್ಷ ಸುದರ್ಶನ ಪಾತಿಕಲ್ಲು ಮನವಿ ನೀಡಿದರು.

ನಿವೃತ್ತಿಗೊಂಡ ಶಿಕ್ಷಕಿ ನಾಗವೇಣಿಯವರನ್ನು ಶಾಲೆಯ ಎಸ್‌.ಡಿ.ಎಂ.ಸಿ ಸದಸ್ಯರು, ಸ್ಥಳೀಯ ಸ್ತ್ರೀ ಶಕ್ತಿ ಸಂಘದ ಸದಸ್ಯರು ಹಾಗೂ ಕುಟುಂಬಸ್ಥರು, ಬಂಧು ವರ್ಗದವರು,
ಪೋಷಕರು ಮತ್ತು ವಿದ್ಯಾರ್ಥಿಗಳು ಗೌರವಿಸಿ ಶುಭ ಹಾರೈಸಿದರು.

ಧ್ವನಿವರ್ಧಕ ಕೊಡುಗೆ:

ಶಾಲೆಗೆ ಕೊಡುಗೆಯಾಗಿ ನೀಡಿದ ಧ್ವನಿವರ್ಧಕವನ್ನು ನಿವೃತ್ತ ಶಿಕ್ಷಕಿ ನಾಗವೇಣಿ ಶ್ರೀಧರ ಕೊಯಿಂಗಾಜೆ ಎಸ್.ಡಿ.ಎಂ.ಸಿ.
ಅಧ್ಯಕ್ಷರಿಗೆ ಹಸ್ತಾಂತರಿಸಿದರು.

ಸಮಾರಂಭದ ಬಳಿಕ ಆಗಮಿಸಿದ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

ಶಾಲಾ ವಿದ್ಯಾರ್ಥಿಗಳ ಬ್ಯಾಂಡ್ ಸೆಟ್ ನೊಂದಿಗೆ ನಿವೃತ್ತ ಶಿಕ್ಷಕಿಯವರನ್ನು ಶಾಲೆಯಿಂದ ಅವರ ಮನೆ ಕೊಯಿಂಗಾಜೆ ತನಕ ಕಾಲ್ನಡಿಗೆಯ ಮೆರವಣಿಗೆಯಲ್ಲಿ ಕರೆದು ಕೊಂಡು ಹೋಗಲಾಯಿತು.

ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮುಖ್ಯ ಶಿಕ್ಷಕ ಚಿನ್ನಸ್ವಾಮಿ ಶೆಟ್ಟಿ ಸ್ವಾಗತಿಸಿದರು. ಸಹ ಶಿಕ್ಷಕಿ‌ ಶ್ರೀಮತಿ ಮಮತಾ ಸನ್ಮಾನ ಪತ್ರ ವಾಚಿಸಿದರು. ಸಹ ಶಿಕ್ಷಕ ರಂಗನಾಥ್ ಎಂ.ಎಸ್ ವಂದಿಸಿದರು.
ಸಹಶಿಕ್ಷಕಿ ಶ್ರೀಮತಿ ಜಲಜಾಕ್ಷಿ ಯವರು ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು.