ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ಆಂತರಿಕ ಗುಣಮಟ್ಟ ಭರವಸಾ ಕೋಶ ಸಮಾಜಶಾಸ್ತ್ರ ವಿಭಾಗ, ಮುಡೂರು ಇನ್ಛೋಟೆಕ್ ಪಂಜ, ಜೇಸಿಐ ಪಂಜ ಪಂಚಶ್ರೀ ಇವುಗಳ ಜಂಟಿ ಆಶ್ರಯದಲ್ಲಿ
ದೀವಿಗೆ ವೃತ್ತಿಪರ ಬದುಕಿಗೆ ದಾರಿದೀಪ ( ವಿದ್ಯಾರ್ಥಿಗಳಿಗಾಗಿ ವೃತ್ತಿ ಸಂದರ್ಶನ ಎದುರಿಸುವುದು ಹಾಗೂ ವೃತ್ತಿ ಪರತೆ ಕಾರ್ಯಾಗಾರ)
ಜು.1.ರಂದು ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯದಲ್ಲಿ ನಡೆಯಿತು.
ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಲೋಕೇಶ್ ಆಕ್ರಿಕಟ್ಟೆ ವಹಿಸಿದ್ದರು. ತರಬೇತುದಾರರಾಗಿ ಜೇಸಿಐ ಭಾರತ ರಾಷ್ಟ್ರೀಯ ತರಬೇತುದಾರ ವೇಣುಗೋಪಾಲ ಪಾಲ್ಗೊಂಡಿದ್ದರು . ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ದೈಹಿಕ ಶಿಕ್ಷಣ ನಿರ್ದೇಶಕ ಡಾ .ದಿನೇಶ್.ಕೆ, ಪಂಜ ಮುಡೂರು ಇನ್ಫೋಟೆಕ್ ನ ಸವಿತಾರ ಮುಡೂರು, ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೋ.ಮನೋಹರ, ಸಮಾಜಶಾಸ್ತ್ರ. ಉಪನ್ಯಾಸಕಿ ಆರತಿ ಕೆ, ಜೇಸಿಐ ಪಂಜ ಪಂಚಶ್ರೀ ಕಾರ್ಯದರ್ಶಿ ವಾಚಣ್ಣ ಕೆರೆಮೂಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವೇದಿಕೆಗೆ ಜೇಸಿ ಅಶ್ವತ್ ಬಾಬುಬ್ಲಬೆಟ್ಲು ಆಹ್ವಾನಿಸಿದರು.ಜೇಸಿವಾಣಿಯನ್ನು ಚಿದಾನಂದ ಕುಳ ವಾಚಿಸಿದರು. ವಾಚಣ್ಣ ಕೆರೆಮೂಲೆ ತರಬೇತುದಾರರ ಪರಿಚಯಿಸಿದರು. ಆರತಿ ಕೆ.ಉಪನ್ಯಾಸಕರು ಸಮಾಜಶಾಸ್ತ್ರ ವಂದಿಸಿದರು.ಜೇಸಿ ಸದಸ್ಯರು ಹಾಗೂ ಶಿಬಿರಾರ್ಥಿಗಳಾದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.