ಬಳ್ಪ ಗ್ರಾಮದ ಎಂರ್ಬಿಲ ಶೀನಪ್ಪ ಗೌಡರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಸಂಜೆ ನಿಧನರಾದರು.
ಇವರಿಗೆ 88 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ನೀಲಮ್ಮ, ಪುತ್ರ ರಾಮಚಂದ್ರ ಎಂರ್ಬಿಲ, ಸೊಸೆ ಶ್ರೀಮತಿ ತುಳಸಿ, ಪುತ್ರಿಯರಾದ ಶ್ರೀಮತಿ ದೇವಕಿ ಕುಶಾಲಪ್ಪ ಮದ್ಕೂರು, ಶ್ರೀಮತಿ ಸುಲೋಚನ ರಮೇಶ್ ಕಟ್ಟೆಮನೆ ಶ್ರೀಮತಿ ಮೀನಾಕ್ಷಿ ತಿಮ್ಮಪ್ಪ ಅರುವ, ಶ್ರೀಮತಿ ವೀರಪ್ಪ ಗೌಡ ಚಿದ್ಗಲ್, ಶ್ರೀಮತಿ ಶಶಿಕಲಾ ದೇವಪ್ಪ ಕಾಪಿಲ, ಶ್ರೀಮತಿ ಸುಶೀಲ ವೆಂಕಟ್ರಮಣ ಚೌಟಾಜೆ, ಶ್ರೀಮತಿ ಯಶೋಧ ವಸಂತ ಕಲ್ಗುಂಡಿ, ಶ್ರೀಮತಿ ವಿಶಾಲ ಶ್ರೀನಿವಾಸ ಬೆಂಗಳೂರು ಸೇರಿದಂತೆ ಮೊಮ್ಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.